ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮೂರು ದಿನ ಸಿಬಿಐ ಕಸ್ಟಡಿಯಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಇಂದು ವಿಡಿಯೋ ಸಂವಾದದ ಮೂಲಕ ಸಿಎಆರ್ ಮೈದಾನದಿಂದಲೇ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,ನ್ಯಾಯಾಲಯ ನವೆಂಬರ್ 23 ವರಗೆ 14 ದಿನ ವಿನಯ ಕುಲಕರ್ಣಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಘೋಷಣೆ ಮಾಡಿದೆ.
ಹೌದು.ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ಮೂರು ದಿನ ಕಸ್ಟಡಿಗೆ ತೆಗೆದುಕೊಂಡು ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಸಿಎಆರ್ ಮೈದಾನದಿಂದಲೇ ಹಾಜರು ಪಡಿಸಿದ್ದರು.
ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ವಿವಾದ ಆಲಿಸಿದ ಧಾರವಾಡ ಜಿಲ್ಲಾ ನ್ಯಾಯಾಲಯ ವಿನಯ ಕುಲಕರ್ಣಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಇನ್ನೂ ವಿನಯ ಕುಲಕರ್ಣಿ ಅವರನ್ನು ಕೆಲವೇ ಕ್ಷಣದಲ್ಲಿ ಹಿಂಡಲಗಾ ಜೈಲಿಗೆ ರವಾನಿಸುವ ಸಾಧ್ಯತೆಗಳಿವೆ ಎಂದು ಮಾಹಿತಿ ಲಭ್ಯವಾಗಿದ್ದು,ಇನ್ನೂ ಹೆಚ್ಚಿನ ಅಪ್ಡೇಟ್ ಗಾಗಿ ನಿರೀಕ್ಷಿಸಲಾಗಿದೆ.
Kshetra Samachara
09/11/2020 01:43 pm