ಹುಬ್ಬಳ್ಳಿ: ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹಾಗೂ ಕೈಗಡವಾಗಿ ಮಾಡಿದ್ದ ಬೆಳೆ ಸಾಲಕ್ಕೆ ಹೆದರಿ ಯುವ ರೈತನೊಬ್ಬ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದಲ್ಲಿ ನಡೆದಿದೆ.
ಕೋಳಿವಾಡ ಗ್ರಾಮದ ಪ್ರವೀಣ ದೇವಿಂದ್ರಪ್ಪ ಗುಂಜಳ (26) ಆತ್ಮಹತ್ಯೆ ಮಾಡಿಕೊಂಡವರು. ಇವರು ಸಾಗುವಳಿಗಾಗಿ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಮತ್ತು ವಿಎಸ್‌ಎಸ್ ಬ್ಯಾಂಕ್ ಶಾಖೆಯಲ್ಲಿ 8 ಲಕ್ಷ ರೂ. ಹಾಗೂ ಗ್ರಾಮದಲ್ಲಿ ಕೆಲವರ 2 ಲಕ್ಷ ರೂ. ಸಾಲ ಪಡೆದಿದ್ದರು. ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸುವುದು ಹೇಗೆಂದು ಮಾನಸಿಕವಾಗಿ ನೊಂದಿದ್ದ ಆತ, ಮನೆಯ ರೂಮ್‌ನಲ್ಲಿ ಮೇಲ್ಟಾವಣಿಯ ಕಬ್ಬಿಣ ಹ್ಯಾಂಗ್ಲರ್ ಗೆ ನೂಲಿನ ಹಗ್ಗದಿಂದ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗ ತಿಳಿದಿವೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/10/2022 02:04 pm