ಹುಬ್ಬಳ್ಳಿ: ಸಾಲದ ಬಾಧೆ ತಾಳಲಾರದೆ ಯುವ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕಲಘಟಗಿ ತಾಲೂಕು ದುಮ್ಮವಾಡ ಗ್ರಾಮದಲ್ಲಿ ನಡೆದಿದೆ.
37 ವಯಸ್ಸಿನ ದ್ಯಾಮಣ್ಣ ಸತ್ತೂರ ಮೃತ ದುದ್ರೈವಿ. ಕೃಷಿಗಾಗಿ ಹಲವೆಡೆ ಸಾಲ ಮಾಡಿಕೊಂಡಿದ್ದ ದ್ಯಾಮಣ್ಣ ಸಾಲ ಮರುಪಾವತಿಸಲು ಸಾಧ್ಯವಾಗದೆ ಮನನೊಂದು ಇಂದು ಬೆಳಿಗ್ಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/03/2022 03:41 pm