ಅಣ್ಣಿಗೇರಿ: ಪಟ್ಟಣದ ಮಜ್ಜಿಗುಡ್ಡ ದಾರಿಯಲ್ಲಿರುವ ದೊಡ್ಡಯ್ಯ ಕಾವಯ್ಯ ಹಿರೇಮಠ ಎಂಬುವವರ ಜಮೀನಿಗೆ ಶುಕ್ರವಾರ ಕಳ್ಳರು ನುಗ್ಗಿ ಬೆಳೆದು ನಿಂತ ಮೆನಸಿನಕಾಯಿ ಗಿಡಗಳನ್ನು ಕಿತ್ತು ಹಾಕಿ ದುಷ್ಕೃತ್ಯ ಎಸಗಿದ್ದಾರೆ.
ಮೊದಲೇ ರೈತ ಸಾಲ ಶೂಲ ಮಾಡಿ ಬದುಕಿನ ಬಂಡಿ ಮುನ್ನಡೆಸುತ್ತಿರುವ ವೇಳೆ ಈ ಕೃತ್ಯ ಬರಸಿಡಿಲು ಬಡಿದಂತ್ತಾಗಿದೆ.
ಅಷ್ಟೇ ಅಲ್ಲದೇ ಪಟ್ಟಣದ ರೈಲು ನಿಲ್ದಾಣದ ಹತ್ತಿರ ಇರುವ ನಬಿಸಾಬ ಜಂಗಲನಾಯ್ಕ ಎಂಬುವರ ಹೊಲದಲ್ಲಿಯೂ ಕೂಡಾ ಸುಮಾರು ಎರಡು ಕ್ವಿಂಟಾಲಕ್ಕಿಂತಲೂ ಹೆಚ್ಚು ಮೆನಸಿನಕಾಯಿಗಳನ್ನು ಬಿಡಿಸಿಕೊಂಡು ಹೋಗಿರುವದು ಬೆಳಕಿಗೆ ಬಂದಿದೆ.
ಇಂತಹ ಘಟನೆಗಳ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ದುಷ್ಕೃತ್ಯ ಎಸುಗುತ್ತಿರುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಸ್ಥಳೀಯ ರೈತರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
23/10/2021 05:30 pm