ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ಓಡಿಸುವ ಬೈಕ್ ಸವಾರರ ಹಾವಳಿ ಹೆಚ್ಚಾಗಿದ್ದು, ಬೈಕ್ ಸವಾರ ಅಟ್ಟಹಾಸದಿಂದ ಪಾದಚಾರಿಗಳು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಅಂತಹುದೇ ಘಟನೆಯೊಂದು ಬೆಳಗಿನ ಜಾವ ನಡೆದಿದೆ.
ರಸ್ತೆ ದಾಟುತ್ತಿದ್ದ ವೃದ್ಧನೋರ್ವನಿಗೆ ಬೈಕ್ ಸವಾರ ಅಪಘಾತವನ್ನುಂಟು ಮಾಡಿ ಸ್ಥಳದಿಂದ ಪರಾರಿಯಾದ ಘಟನೆ ಉಣಕಲ್ ಬಳಿಯ ಶ್ರೀ ಸಿದ್ಧಪ್ಪಜ್ಜನ ದೇವಸ್ಥಾನದ ಬಳಿ ನಡೆದಿದೆ.
ಚಹಾ ಕುಡಿಯಲು ಬಂದಿದ್ದ ಉಣಕಲ್ ಗ್ರಾಮದ ಕಲ್ಲನಗೌಡ ಮಿಸಿಗೌಡರ ಎಂಬ ವೃದ್ಧ ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಬೈಕ್ ಸವಾರನೋರ್ವ ವೃದ್ಧನಿಗೆ ಗುದ್ದಿದ್ದಾನೆ ಇದರಿಂದ ನೆಲಕ್ಕೆ ಬಿದ್ದ ವೃದ್ಧನ ತಲೆಗೆ ಗಂಭೀರ ಸ್ವರೂಪದ ಗಾಯ ವಾಗಿದ್ದು ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆ ಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಬೈಕ್ ಸವಾರನ ಪತ್ತೆಗೆ ಸಂಚಾರಿ ಪೊಲೀಸರು ಮುಂದಾಗ ಬೇಕಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
12/08/2022 02:38 pm