ಹುಬ್ಬಳ್ಳಿ: ನಿನ್ನೆ ಭಾನುವಾರ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದರು. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ನಿನ್ನೆ ರಾತ್ರಿಯಿಂದ ಶೋಧ ಕಾರ್ಯಾಚರಣೆ ನಡೆದಿಸಿದ್ದರು. ಆದರೆ, ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರೆಸಿದ್ದಾರೆ ಯುವಕರ ಶವ ಪತ್ತೆಯಾಗಿವೆ.
ಹುಬ್ಬಳ್ಳಿ ತಾಲೂಕಿನ ಅಂಚರಟಗೇರಿ ಬಳಿ ಇರುವ ಬುಡ್ನಾಳ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಯುವಕರ ಶವ ಪತ್ತೆಯಾಗಿವೆ. ಇವರು ಹಳೆ ಹುಬ್ಬಳ್ಳಿಯ ನೇಕಾರ ನಗರದ ವಿಜಯ್ ಸಿದ್ದಪ್ಪ ಕಾಂಬ್ಲೆ (25) ಹಾಗೂ ರಾಘವೇಂದ್ರ ಶಿವಪ್ಪ ತೆಗ್ಗಿನಮನಿ (24) ಎಂಬುವವರು ಮೃತರು ಎಂದು ತಿಳಿದು ಬಂದಿದೆ.
ಧಾರವಾಡ ಜಿಲ್ಲಾ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ ಭಂಡಾರಿ ಮಾರ್ಗದರ್ಶನದಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದು, ಅಗ್ನಿ ಶಾಮಕದಳ ಠಾಣಾ ಅಧಿಕಾರಿ ಎಂ.ಆರ್. ಹತ್ತರಕಿ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದೆ.
ಸಹಾಯಕ ಅಗ್ನಿಶಾಮಕ ದಳದ ಅಧಿಕಾರಿ ಚಂದ್ರಕಾಂತ್ ಅಮರಗೋಳ ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆಯಲ್ಲಿದ್ದರು.
Kshetra Samachara
07/03/2022 02:27 pm