ಧಾರವಾಡ: ಏರ್‌ಫೋನ್ ಹಾಕಿಕೊಂಡು ಹೊರಟಿದ್ದ ವ್ಯಕ್ತಿಯೊಬ್ಬರಿಗೆ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ಆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಧಾರವಾಡದ ರಾಜೀವಗಾಂಧಿನಗರದ ರೈಲ್ವೆ ಹಳಿಯಲ್ಲಿ ನಡೆದಿದೆ.
ರಾಜೀವಗಾಂಧಿನಗರದ ಮಹ್ಮದ್‌ರಿಹಾನ್ ರಜಾಕ್ ಶೇಖ್(28) ಎಂಬುವರೇ ಈ ಘಟನೆಯಲ್ಲಿ ಮೃತಪಟ್ಟವರು. ಏರ್‌ಫೋನ್ ಹಾಕಿಕೊಂಡು ರೈಲ್ವೆ ಹಳಿ ಹಿಡಿದು ಹೊರಟಿದ್ದ ಈ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
Kshetra Samachara
19/01/2022 10:41 pm