ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲಕಮಾಪುರದಲ್ಲಿ ಬಣವೆಗಳಿಗೆ ಬೆಂಕಿ

ಧಾರವಾಡ: ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಎರಡು ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಸುಟ್ಟ ಕರಕಲಾದ ಘಟನೆ ಇಂದು ಬೆಳಗಿನಜಾವ ನಡೆದಿದೆ.

ಲಕಮಾಪುರ ಗ್ರಾಮದ ಅಶೋಕ ಹುಡೇದ ಎಂಬುವವರಿಗೆ ಸೇರಿದ ಒಂದು ಕಣಕಿ ಬಣವಿ ಹಾಗೂ ಒಂದು ಹೊಟ್ಟಿನ ಬಣವಿ ಬೆಂಕಿಗೆ ಆಹುತಿಯಾಗಿವೆ. ಇದರಿಂದ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ ಮೇವು ಸುಟ್ಟು ಕರಕಲಾಗಿದೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆಯೂ ಕಿಡಿಗೇಡಿಗಳು ಇದೇ ರೀತಿ ಅಶೋಕ ಅವರಿಗೆ ಸೇರಿದ್ದ ಬಣವೆಗಳಿಗೆ ಬೆಂಕಿ ಇಟ್ಟಿದ್ದರು. ಈ ಬಾರಿಯೂ ಉದ್ದೇಶಪೂರ್ವಕವಾಗಿಯೇ ಬಣವೆಗಳಿಗೆ ಬೆಂಕಿ ಹಚ್ಚಿರಬಹುದು ಎಂದು ಅಶೋಕ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

19/01/2022 09:56 am

Cinque Terre

48.52 K

Cinque Terre

0

ಸಂಬಂಧಿತ ಸುದ್ದಿ