ಹುಬ್ಬಳ್ಳಿ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಸವಾರ ಸ್ಥಳದಲ್ಲೇ ಸಾವನ್ನಪಿದ ಘಟನೆ ಇಂದು ರಾತ್ರಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ.
ನೀಲಪ್ಪ ಮಾದರ ಎಂಬುವರಿಗೆ ಸೇರಿದ ಬೈಕಿನಲ್ಲಿ ಬರುತ್ತಿದ್ದ ವ್ಯಕ್ತಿಯು, ಮೊಬೈಲ್‌ನಲ್ಲಿ ಮಾತನಾಡುತ್ತಾ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣವೇ ನಿಯಂತ್ರಣ ತಪ್ಪಿ, ಲಾರಿಯ ಚಕ್ರದಡಿ ಸಿಲುಕಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯಿಂದಾಗಿ ಸಂಚಾರವನ್ನ ಹತೋಟಿಗೆ ತರಲು ಸಂಚಾರಿ ಠಾಣೆಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರಸ್ತೆಯಲ್ಲಿರುವ ಮೃತ ದೇಹವನ್ನು ಕಿಮ್ಸ್‌ಗೆ ರವಾನೆ ಮಾಡಲಾಗಿದ್ದು, ಎರಡು ವಾಹನಗಳನ್ನ ವಶಕ್ಕೆ ಪಡೆದಿರುವ ಪೂರ್ವ ಸಂಚಾರಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
27/02/2021 11:02 pm