ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಣ್ಣೆ ಏಟಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದವನಿಗೆ ಖಾಕಿ ಬಿಸಿ

ಹುಬ್ಬಳ್ಳಿ: ಚಾಲಕನೋರ್ವ ಅಡ್ಡಾದಿಡ್ಡಿ ಕಾರು ಓಡಿಸಿಕೊಂಡು ಬಂದು ಅಪಘಾತವನ್ನುಂಟು ಮಾಡಿದ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಲಕ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದ. ಪರಿಣಾಮ ಅಡ್ಡಾದಿಡ್ಡಿ ಕಾರು ಓಡಿಸಿ ಕೆಲ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ. ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನವನಗರ ಹಾಗೂ ಉತ್ತರ ಸಂಚಾರ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಾಲಕನಿಗೆ ಬಿಸಿ ಮುಟ್ಟಿಸಿ ವಶಕ್ಕೆ ಪಡೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

27/01/2021 06:36 pm

Cinque Terre

103.95 K

Cinque Terre

2

ಸಂಬಂಧಿತ ಸುದ್ದಿ