ಧಾರವಾಡ: ಧಾರವಾಡದ ನಾಯಕನ ಅಡ್ಡೆ ಬಳಿಯಿರುವ ಪೆಟ್ರೋಲ್ ಬಂಕ್‌ನಲ್ಲಿ ಗ್ಯಾಸ್ ಡಂಪ್ ಮಾಡಿ ತೆರಳುವಾಗ ವಾಹನವೊಂದು ಪಕ್ಕದ ಕಾಲುವೆಗೆ ಜಾರಿದೆ. ಗ್ಯಾಸ್ ಡಂಪ್ ಮಾಡುವ ಮೊದಲೇ ಲಾರಿ ಪಲ್ಟಿಯಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ಗ್ಯಾಸ್ ಸಿಲೆಂಡರ್ ತೆಗೆದುಕೊಂಡು ಬಂದಿದ್ದ ಟ್ಯಾಂಕರ್ ಎಲ್ಲವನ್ನೂ ಖಾಲಿ ಮಾಡಿ, ಮುಂದೆ ತೆಗೆದುಕೊಳ್ಳುವಾಗ ಗಟಾರಿನಲ್ಲಿ ಹೋಗಿ ಟ್ಯಾಂಕರ್ ಅಲ್ಲಿಯೇ ಮುಗುಚಿದೆ. ತಕ್ಷಣವೇ ವಾಹನದಿಂದ ಜಿಗಿದು ಪ್ರಾಣವನ್ನು ಉಳಿಸಿಕೊಂಡಿರುವ ಚಾಲಕ ರೂಪೇಶ, ರಾತ್ರಿಯಿಂದಲೂ ಅಲ್ಲಿಯೇ ಕಾಯ್ದು, ಮುಗುಚಿರುವ ವಾಹನವನ್ನು ಕ್ರೇನ್ ಮೂಲಕ ಮೇಲಕ್ಕೇಳಿಸುವ ಪ್ರಯತ್ನ ನಡೆದಿದೆ.
ಪೆಟ್ರೋಲ್ ಬಂಕ್ ಹತ್ತಿರದಲ್ಲೇ ಈ ಅವಘಡ ನಡೆದಿದೆ. ಧಾರವಾಡ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Kshetra Samachara
20/01/2021 11:57 am