ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಭಾರೀ ಅನಾಹುತದಿಂದ ಪತ್ರಕರ್ತ ಶೀಲವಂತ ಕುಟುಂಬ ಪಾರು

ಧಾರವಾಡ: ಹಿರಿಯ ಪತ್ರಕರ್ತ ಹರ್ಷವರ್ಧನ ಶೀಲವಂತ ಅವರ ಕಾರು ಅಪಘಾತಕ್ಕೀಡಾಗಿದೆ. ಕಳೆದ ಭಾನುವಾರ ಹಳಿಯಾಳ-ದಾಂಡೇಲಿ ಪ್ರವಾಸಕ್ಕೆ ಹೊರಟಾಗ ಕಾರು ಅಪಘಾತವಾಗಿದೆ.

ರಸ್ತೆ ತಿರುವಿನಲ್ಲಿ ಅಚಾನಕ್ಕಾಗಿ ಎದುರಿಗೆ ಬಂದ ಆಟೋರಿಕ್ಷಾಗೆ ದಾರಿ ಕೊಡುವ ವೇಳೆ ಕಾರು ಇಳಿಜಾರಿನತ್ತ ಹೋಗಿದೆ. ಕ್ಷಣಾರ್ಧದಲ್ಲೇ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಳಗಿದ್ದ ಹರ್ಷವರ್ಧನ ಶೀಲವಂತ ಅವರ ಕುಟುಂಬ‌ ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದೆ.

ಹರ್ಷವರ್ಧನ ಅವರ‌ ಮಾವ ಕಾರು ಚಲಾಯಿಸುತ್ತಿದ್ದರು ಎಂಬ ಮಾಹಿತಿ ಇದೆ. ಕಾರಿನಲ್ಲಿದ್ದ ಎಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರು. ಹರ್ಷವರ್ಧನ ಶೀಲವಂತ ದಂಪತಿ ಹಾಗೂ ಮಾವನವರಿಗೆ ತರಚಿದ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

20/01/2021 08:35 am

Cinque Terre

92.83 K

Cinque Terre

7

ಸಂಬಂಧಿತ ಸುದ್ದಿ