ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಕಾಮಗಾರಿಯ ಕಾಂಕ್ರೀಟ್ ಮಿಕ್ಸರ್ ವಾಹನವೊಂದು ಬ್ರೇಕ್ ಫೇಲ್ ಆಗಿ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋ ಚಾಲಕ ಪವಾಡ ರೀತಿ ಬದುಕುಳಿದ ಘಟನೆ ಯೂ ಮಾಲ್ ಬಳಿ ನಡೆದಿದೆ.
ಜೆಸಿ ನಗರದಿಂದ ಯೂ ಮಾಲ್ ಕಡೆಗೆ ಬರುವ ರಸ್ತೆಯಲ್ಲಿ ಇಂದು ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಆಟೋ ಚಾಲಕ ಲಕ್ಷ್ಮಣ ಹುಲಕೋಟಿ ತಕ್ಷಣವೇ ಹೊರಗೆ ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ಜೆಸಿಬಿಯನ್ನ ತಂದು ಸಿಮೆಂಟ್ ಮಿಕ್ಸರ್ ಅನ್ನ ಹೊರಗೆ ಎಳೆದು, ನಂತರ ರಸ್ತೆ ಸಂಚಾರವನ್ನ ಸುಗಮಗೊಳಿಸಲಾಯಿತು.
Kshetra Samachara
04/10/2020 09:02 pm