ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಟ್ಟಿಂಗ್ ದಂಧೆ ವೇಳೆ ಇಬ್ಬರು ಅಂದರ್

ಧಾರವಾಡ: ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ 2.15 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಧಾರವಾಡ ಕಲಮಾಪುರದ ಚೀನಿ ಬಸ್ಸು ಅಲಿಯಾಸ್ ಬಸವರಾಜ ಹೆಬ್ಬಳ್ಳಿ ಹಾಗೂ ಕಿರಣ್ ಕಟ್ಟೇಕಾರ ಎಂಬುವವರೇ ಬಂಧಿತ ಆರೋಪಿಗಳು.

ಐಪಿಎಲ್ ಮ್ಯಾಚ್ ಪ್ರಾರಂಭವಾದಾಗಿನಿಂದ ಬೆಟ್ಟಿಂಗ್ ದಂಧೆ ಜೋರಾಗಿ ನಡೆದಿದ್ದು, ಕೆಲವೆಡೆ ಪೊಲೀಸರು ಬೆಟ್ಟಿಂಗ್ ಕುಳಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ನಿನ್ನೆ ತಡರಾತ್ರಿ ಬೆಟ್ಟಿಂಗ್ ನಡೆಸುತ್ತಿದ್ದ ವೇಳೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಚೀನಿ ಬಸ್ಸು ಹಾಗೂ ಕಿರಣ್ ಕಟ್ಟೇಕಾರ ಎಂಬುವವರನ್ನು ಬಂಧಿಸಿದ್ದಾರೆ.

ಚೀನಿ ಬಸ್ಸು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಎಂದು ಹೇಳಲಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

02/11/2020 11:48 am

Cinque Terre

46.93 K

Cinque Terre

0

ಸಂಬಂಧಿತ ಸುದ್ದಿ