ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ದರೋಡೆ ಮಾಡುತ್ತಿದ್ದ ಐವರನ್ನು ತನಿಖಾ ತಂಡದ ಮೂಲಕ ಕಾರ್ಯಾಚರಣೆ ನಡೆಸಿದ ಎಪಿಎಂಸಿ ಠಾಣೆ ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರ ರಾಮಣ್ಣ ವಡ್ಡರ,ಕಿರಣ,ಸಂಜೀವ,ಶಿವಕುಮಾರ್, ದೀಪಕ್ ಎಂಬುವವರೇ ಬಂಧಿತ ಆರೋಪಿಗಳು.ಬಂಧಿತರಿಂದ 70,000 ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ನೂತನ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದು,ಕಳೆದ ಕೆಲವು ದಿನಗಳಿಂದ ಕ್ರೈಂಗಳಿಗೆ ಕಡಿವಾಣ ಹಾಕುತ್ತಿದ್ದಾರೆ.
Kshetra Samachara
31/10/2020 11:17 pm