ಹುಬ್ಬಳ್ಳಿ: ಆತ ಆವತ್ತು ತನ್ನ ಸ್ನೇಹಿತನನ್ನ ಉಳಿಸೋಕೆ ಪಡಬಾರದ ಕಷ್ಟ ಪಟ್ಟಿದ್ದ. ಸ್ಥಳೀಯರನ್ನು ಕರೆದು ಸಹಾಯ ಪಡೆದಿದ್ದ, 108 ಆಂಬ್ಯಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಬೇಷ್ ಎನ್ನಿಸಿಕೊಂಡಿದ್ದ. ಅಷ್ಟಕ್ಕೂ ಅಲ್ಲಿ ಗಾಯಗೊಂಡ ಸಾಗರ್ ಅಂಗಡಿ ಎನ್ನೋದು ಗೊತ್ತಾಗಿತ್ತು. ಆದರೆ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಗರ್ ಮರುದಿನವೇ ಸಾವನ್ನಪ್ಪಿದ.
ಅಲ್ಲಿಗೆ ಪೊಲೀಸರು ಕೂಡಾ ಅದೊಂದು ಅಸಹಜ ಸಾವು ಎಂದು ದೂರು ದಾಖಲಸಿಕೊಂಡಿದ್ದರು. ಆದರೆ ಆ ಸಿಸಿಟಿವಿ ಹೇಳಿದ ಸತ್ಯ ಸಧ್ಯ ಖಾಕಿ ಪಡೆಯನ್ನು ದಿಗ್ಬ್ರಾಂತಗೊಳಿಸಿದೆ.
ಇದು ವಿಚಿತ್ರವಾದರೂ ನೀವು ನಂಬಲೇಬೇಕಾದ ಸತ್ಯ.ಈ ಸಿಸಿ ಟಿವಿ ದೃಶ್ಯವನ್ನೊಮ್ಮೆ ಚೆನ್ನಾಗಿ ನೋಡಿ.. ಸ್ನೇಹಿತನ ಬೆನ್ನಿಗೆ ಚೂರಿ ಹಾಕಿದ್ದ ಇಮ್ತಿಯಾಜ್ ಬಣ್ಣ ಬಯಲಾಗಿದ್ದು.
ಕುಡಿದು ಕಂಬಕ್ಕೆ ಡಿಕ್ಕಿ ಹೊಡೆದರೆ ಸಾಗರ್ ಬಟ್ಟೆ ಹರಿದಿದ್ದು ಏಕೆ ಎನ್ನುವ ಅನುಮಾನ ಕಾಡುತ್ತೆ. ಹೀಗಾಗಿ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಘಟನೆ ನಡೆದ ಸ್ಥಳದ ಅಕ್ಕ ಪಕ್ಕ ಪ್ರದೇಶದ ಸಿಸಿಟಿವಿ ಪುಟೇಜ್ ನೋಡಿದಾಗ ಭಯಾನಕ ಸತ್ಯ ಹೊರಬರುತ್ತದೆ. ಆ ಸಿಸಿಟಿವಿಯಲ್ಲಿ ಇದೇ ಸಾಗರ ಹಾಗೂ ಇಮ್ತಿಯಾಜ್ ಹೊಡೆದಾಟ ಮಾಡೋ ದೃಶ್ಯ ಸೆರೆ ಸಿಕ್ಕಿತ್ತು. ತಕ್ಷಣವೇ ಇಮ್ತಿಯಾಜನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರಿಗೆ ಗೊತ್ತಾಗಿದ್ದು ಕೊಲೆಗಾರ ಬೇರೆ ಯಾರು ಅಲ್ಲ ಈತನೇ ಅಂತ..
ಕೇಶ್ವಾಪುರ ಠಾಣೆಗೆ ಇಮ್ತಿಯಾಜನನ್ನು ಕರೆತರುತ್ತಿದ್ದಂತೆ, ಆತ ಹೆದರಿ ಬಿಟ್ಟಿದ್ದ. ಪೊಲೀಸರಿಗೆ ತಾನು ಮಾಡಿದ ವಿಷಯ ಗೊತ್ತಾಗಿದೆ ಎನ್ನುವುದನ್ನು ಆತನೇ ಅರಿತುಕೊಂಡಿದ್ದ.ಅಲ್ಲದೇ ಖಾಕಿ ಪಡೆ ಕೂಡಾ ಆತನ್ನ ಸಿಸಿಟಿವಿ ದೃಶ್ಯ ಇಟ್ಟುಕೊಂಡು ಪ್ರಶ್ನೆ ಮಾಡಿತ್ತು. ಅವಗಾಲೇ ನೋಡಿ ಈ ಇಮ್ತಿಯಾಜ್ ಕೊಲೆ ರಹಸ್ಯ ಬಾಯಿಬಿಟ್ಟಿದ್ದು.
Kshetra Samachara
30/10/2020 08:56 pm