ಧಾರವಾಡ: ಮನೆ ಮುಂದೆ ನಿಲ್ಲಿಸುತ್ತಿದ್ದ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು ಇದೀಗ ಮನೆ ಮುಂದೆ ನಿಲ್ಲಿಸುತ್ತಿರುವ ಕಾರನ್ನೂ ಕದ್ದುಕೊಂಡು ಹೋಗಲು ಆರಂಭಿಸಿದ್ದಾರೆ.
ಹೌದು! ಧಾರವಾಡದಲ್ಲಿ ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ಕಳ್ಳರು ಕದ್ದೊಯ್ದಿರುವ ಘಟನೆ ಧಾರವಾಡದ ಯಾಲಕ್ಕಿಶೆಟ್ಟರ್ ಕಾಲೊನಿಯಲ್ಲಿ ನಡೆದಿದೆ.
ಪ್ರವೀಣ ಹುಯಿಲಗೋಳ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿರುವ ಈ ಕಾರು ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ್ದಾಗಿದೆ. ಹಾಡಹಗಲೇ ಈ ರೀತಿ ಕಾರು ಕದ್ದೊಯ್ದಿದ್ದು ಪೊಲೀಸರಿಗೆ ಹೊಸ ತಲೆ ನೋವು ಆರಂಭವಾದಂತಾಗಿದೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ವಿದ್ಯಾಗಿರಿ ಠಾಣೆ ಪೊಲೀಸರು ಕಳ್ಳರ ಪತ್ತೆಯಾಗಿ ಜಾಲ ಬೀಸಿದ್ದಾರೆ.
Kshetra Samachara
30/10/2020 07:03 pm