ಅಣ್ಣಿಗೇರಿ: ಕುಡಿಯಲು ನೀರು ತರಲು ಕೃಷಿ ಹೊಂಡಕ್ಕೆ ತೆರಳಿದ್ದ ಬಾಲಕನೋರ್ವ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ಮನೋಜ್ ಬಸವರಾಜ ಕಮ್ಮಾರ (14) ಎಂದು ತಿಳಿದು ಬಂದಿದೆ. ಮನೋಜ್ ಮೂಲತಃ ಮುದ್ದೇಬಿಹಾಳದವನಾಗಿದ್ದು ಮಣಕವಾಡದ ಸಂಬಂಧಿಕರ ಮನೆಗೆ ವಾಸವಿದ್ದ. ಇಂದು ಹೊಲಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದ್ದು, ಮೃತ ಬಾಲಕನ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.
Kshetra Samachara
29/10/2020 11:31 pm