ಧಾರವಾಡ: ಧಾರವಾಡ ಸೇರಿದಂತೆ ವಿವಿಧೆಡೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂವರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಅಲಿರಾಜಾ ಇರಾಣಿ, ಬೀದರ್ ನ ಬಿಲಾಲ್ ಇರಾಣಿ ಹಾಗೂ ಮಧ್ಯಪ್ರದೇಶ ಮೂಲದ ಗುಲಾಮ ಅಲಿ ಇರಾಣಿ ಎಂಬುವವರೇ ಬಂಧಿತ ಆರೋಪಿಗಳು.
ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಇವರು ಸರಗಳ್ಳತನ ಮಾಡಿ ಪರಾರಿಯಾಗಿದ್ದರು. ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ಮಾರ್ಗದರ್ಶನದ ಮೇರೆ ಎಸಿಪಿ ಅನುಷಾ ಹಾಗೂ ವಿದ್ಯಾಗಿರಿ ಠಾಣೆ ಇನಸ್ಪೆಕ್ಟರ್ ಬಸಾಪುರ ಅವರನ್ನೊಳಗೊಂಡ ತಂಡ ಈ ಮೂವರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ 1 ಬೈಕ್, 3 ಮೊಬೈಲ್, 13,190 ಗ್ರಾಂ ತೂಕದ ಚಿನ್ನದ ಸಾಮಾನುಗಳು ಸೇರಿದಂತೆ ಒಟ್ಟಾರೆ 1,44,440 ಮೌಲ್ಯದ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
29/10/2020 05:17 pm