ಹುಬ್ಬಳ್ಳಿ:ಹು-ಧಾ ಅವಳಿನಗರದಲ್ಲಿ ನಡೆಯುತ್ತಿರುವ ಬೈಕ್ ಕಳ್ಳತನ ಪ್ರಕರಣ ಮಟ್ಟ ಹಾಕಲು ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯಾಚರಣೆ ನಡೆಯುತ್ತಿದ್ದು,ಕೇಶ್ವಾಪುರ ಪೊಲೀಸರು ನಗರದಲ್ಲಿ ಮೋಟಾರ್ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ.
ಧಾರವಾಡದ ವಿದ್ಯಾಗಿರಿ ನಿವಾಸಿ ಅಪ್ಪಯ ಅಲಿಯಾಸ್ ಅಪ್ಯಾ ರಾಚಯ್ಯ ಬೆಂಡಿಗೇರಿಮಠ್ ಎಂಬುವವನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯಿಂದ ಕಪ್ಪು ಪಲ್ಸರ್ ಬೈಕ್ (ಕೆಎ -25, ಇಇ -8178), ಕಪ್ಪು ಸ್ಪ್ಲೆಂಡರ್ ಪ್ಲಸ್ (ಕೆಎ -25, ಇಆರ್ -1287), ಮತ್ತು ಎರಡು ಕಪ್ಪು ಸ್ಪ್ಲೆಂಡರ್ ಪ್ರೊ ಮೋಟಾರು ಬೈಕುಗಳನ್ನು (ಕೆಎ -25, ಇಎಫ್ -3358 ಮತ್ತು ಕೆಎ -25, ಯು -1448) ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೇಶ್ವಾಪುರ ನಿಲ್ದಾಣದ ಅಧಿಕಾರಿಗಳು ಸುರೇಶ್ ಕುಂಬಾರ ಮತ್ತು ಪಿಎಸ್ಐ ಸದಾಶಿವ ಕನಟ್ಟಿ ಅವರು ತನಿಖಾ ತಂಡದ ನೇತೃತ್ವ ವಹಿಸಿದ್ದರು.
ಪೊಲೀಸರು ಎಂ ಡಿ ಕಲವಾಡ, ಡಿ. ವೈ. ಭಜಂತ್ರಿ, ಎಸ್. ಪಿ.ಕೇಲ್, ಆರ್.ಎಲ್. ರಾಥೋಡ್, ಆರ್. ಪಿ.ಕೆಂಡುರಾ, ವಿ. ಎ. ಅಳಗವಾಡಿ, ಹೆಚ್ ಬಿ ಮಡೋಲಿ, ಶರಣಪ್ಪ ಕರಿಯಂಕಣ್ಣವರ ಸಹ ತನಿಖೆಯಲ್ಲಿದ್ದರು.
Kshetra Samachara
26/10/2020 11:17 pm