ಧಾರವಾಡ: ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದ ಯುವಕ ಕಾಣೆಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಓಂನಗರ ನಿವಾಸಿ ಪ್ರಭಾವತಿ ಅವರ ಪತಿ ಸಂತೋಷ ಮೊಗವೀರ ಅಕ್ಟೋಬರ್ 3ರಂದು ನಾಪತ್ತೆಯಾಗಿದ್ದಾರೆ. 35 ವರ್ಷದ ಸಂತೋಷ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಯಾರಿಗಾದರೂ ಈ ವ್ಯಕ್ತಿ ಕಂಡಲ್ಲಿ ಅಥವಾ ಮಾಹಿತಿ ಸಿಕ್ಕಲ್ಲಿ ತಕ್ಷಣ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ಇಲ್ಲವೇ, ಶಹರ ನಿಯಂತ್ರಣ ಕೊಠಡಿ ಹುಬ್ಬಳ್ಳಿ-ಧಾರವಾಡ ರವರಿಗೆ ತಿಳಿಸಲು ಕೋರಲಾಗಿದೆ. ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ 0836-2233513 /100 ಸಂಪರ್ಕಿಸುವಂತೆ ಧಾರವಾಡ ವಿದ್ಯಾಗಿರಿ ಪೊಲೀಸರು ತಿಳಿಸಿದ್ದಾರೆ.
Kshetra Samachara
13/10/2020 01:01 pm