ಧಾರವಾಡ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಕರ್ನಾಟಕ ಕಾಲೇಜು ಹಿಂಬದಿಯಲ್ಲಿ ನಾರಾಯಣಪುರದ ಅಕ್ಷಯ ಮಹಾದೇವಪ್ಪ ತಲವಾಯಿ, ಶ್ರೀರಾಮನಗರದ ಮಹ್ಮದಯಾಸೀನ್ ಅಬ್ದುಲರಶೀದ್ ಗಬ್ಬರ ಮತ್ತು ಜಕಣಿಭಾವಿ ರಸ್ತೆಯ ಕಿಶೋರ ಉಮೇಶ ಪೂಜಾರಿ ಎಂಬುವವರು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ 3.46 ಲಕ್ಷ ನಗದು ಮತ್ತು ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
Kshetra Samachara
10/10/2020 04:23 pm