ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್‌ಡೌನ್ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಬರ್ಬರವಾಗಿ ಕೊಲೆಗೈದ ಪತ್ನಿ

ಹುಬ್ಬಳ್ಳಿ: ಲಾಕ್‌ಡೌನ್ ಘೋಷಣೆಯಾದ ವೇಳೆ ಅನೈತಿಕ ಸಂಬಂಧಕ್ಕೆ ಅಡ್ಡಿ ಉಂಟಾದ ಪರಿಣಾಮ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿ ರೈಲ್ವೇ ಹಳಿಯ ಮೇಲೆ ಹಾಕಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಮೂಲತಃ ಶ್ರೀನಿವಾಸಪೂರದ ಗಂಗಾಜಲ ತಾಂಡದ ಚಂದ್ರಪ್ಪ ಲಮಾಣಿ ಕೊಲೆಯಾದ ಪತಿ. ಶೋಭಾ ಚಂದ್ರಪ್ಪ ಲಮಾಣಿ ಹಾಗೂ ದಿಳ್ಳೆಪ್ಪ ಯಮನಪ್ಪ ಅಂತರವಳ್ಳಿ ಕೊಲೆ ಮಾಡಿದ ಆರೋಪಿಗಳು. ಚಂದ್ರಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ ಪತ್ನಿ ದಿಳ್ಳೆಪ್ಪ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಲಾಕ್‌ಡೌನ್ ಘೋಷಣೆಯಾದ ಸಂದರ್ಭದಲ್ಲಿ ಅನೈತಿಕ ಸಂಬಂಧಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಶೋಭಾ ಪ್ರಿಯಕರ ದಿಳ್ಳೆಪ್ಪ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಪ್ರಕರಣದಲ್ಲಿ ಬಾಲಕನೊಬ್ಬ ಭಾಗಿಯಾಗಿರುವುದು ತನಿಖೆಯ ಮೂಲಕ ಪತ್ತೆಯಾಗಿದೆ.

ರಾಣೆಬೆನ್ನೂರ ರೈಲ್ವೇ ನಿಲ್ದಾಣದ ಹತ್ತಿರ ಚಂದ್ರಪ್ಪನ ಶವ ದೊರೆತಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೇ ಪೊಲೀಸರು ಕೊಲೆ ಮಾಡಿದ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ರೈಲ್ವೆ ಸಿಪಿಐ ಜೆ ಎಂ‌ಕಾಲಿಮಿರ್ಚಿ ನೇತೃತ್ವದಲ್ಲಿ ರೈಲ್ವೆ ಪೊಲೀಸರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

10/10/2020 02:21 pm

Cinque Terre

28.95 K

Cinque Terre

2

ಸಂಬಂಧಿತ ಸುದ್ದಿ