ಹುಬ್ಬಳ್ಳಿ: ರಾಬರ್ಟ್ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ಶರಣ್ ಸೇರಿ ನಿರ್ಮಾಣ ಮಾಡಿರುವ ಗುರುಶಿಷ್ಯರು ಚಿತ್ರ ಇದೆ ತಿಂಗಳು 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇಂದು ಗಂಡು ಮಟ್ಟಿನ ನಾಡು ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಟ್ರೈಲರ್‌ನ್ನು ಚಿತ್ರದ ನಾಯಕ ಶರಣ್ ಬಿಡುಗಡೆ ಮಾಡಿದರು.
ಸಧ್ಯ ಆದುನಿಕ ಯುಗದಲ್ಲಿ ಹಳೇ ಗ್ರಾಮೀಣ ಆಟಗಳು ಮರೆ ಮಾಚಿದ್ದರಿಂದ, ತರುಣ ಸುಧೀರ್ ಹಾಗೂ ನಟ ಶರಣ್ ಅವರು ಹಳೇ ಆಟಗಳನ್ನು ಬೆಳಕಿಗೆ ತರಲು ಖೋ ಖೋ ಆಟದ ಹಿನ್ನೆಲೆಯಲ್ಲಿ ನಡೆಯುವ ಕಥಾಹಂದರವನ್ನು ಹೆಣೆದು ಚಿತ್ರವನ್ನು ಇದೇ 23 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು, ಇಂದು ಹುಬ್ಬಳ್ಳಿಯಲ್ಲಿ ಗುರು ಶಿಷ್ಯರು ಚಿತ್ರದ ಟ್ರೈಲರ್ ಮತ್ತು ಸಾಂಗ್ಸ್ ಬಿಡುಗಡೆ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/09/2022 10:05 pm