ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜುಲೈ 15ಕ್ಕೆ ಪದ್ಮಾವತಿ ಚಿತ್ರ ಬಿಡುಗಡೆ

ಹುಬ್ಬಳ್ಳಿ: ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಎಂಬ ಹಾಸ್ಯಮಯ ಚಲನಚಿತ್ರವನ್ನು ನಿರ್ಮಿಸಿದ್ದ, ನಟ ಹಾಗೂ ನಿರ್ಮಾಪಕ ವಿಕ್ರಮ್ ಆರ್ಯ ಹಾಗೂ ಸಾಕ್ಷಿ ಮೇಘನಾ ಅಭಿನಯದ ಪದ್ಮಾವತಿ ಚಲನಚಿತ್ರ ಇದೇ ಜುಲೈ 15ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಹಾಗೂ ನಿರ್ಮಾಪಕ ವಿಕ್ರಮ್ ಆರ್ಯ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ್ ಆ್ಯಂಡ್ ರಾವ್ ಸಿನಿಮಾಸ್ ಲಾಂಛನದಲ್ಲಿ ದಾಮೋದರ್ ರಾವ್ ಹಾಗೂ ನಾಮದೇವ್ ಭಟ್ಟರ್ ಸೇರಿ ನಿರ್ಮಿಸಿರುವ ಚಿತ್ರವು ಶಿವಳ್ಳಿಬೆಟ್ಟ, ಸಾಗರ, ಹೊಸನಗರ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮುಂತಾದೆಡೆ 50 ದಿನಗಳ ಕಾಲ ಚಿತ್ರೀಕರಣ ಮಾಡಸಲಾಗಿದೆ.

ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಮಿಥುನ್ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶೋಯಬ್ ಅಹ್ಮದ್ ಅವರ ಛಾಯಾಗ್ರಹಣ ಹಾಗೂ ಹಾಡುಗಳಿಗೆ ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆಯಿದೆ. ಲತಾ ಎಸ್. ಅವರು ಚಿತ್ರದ ಕಥೆ ಹಾಗೂ ಚಿತ್ರಕಥೆ ರಚಿಸಿದ್ದಾರೆ.

ಈಶ್ವರ್ ಅವರ ಸಂಕಲನ, ಥ್ರಿಲ್ಲರ್ಮಂಜು ಅವರ ಸಾಹಸ ನಿರ್ದೇಶನ, ತ್ರಿಭುವನ್ ಅವರ ನೃತ್ಯ ನಿರ್ದೇಶನ, ಪ್ರೇಮ್ ಸಾಯಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ವಿಕ್ರಮ್ ಆರ್ಯ, ಸಾಕ್ಷಿ ಮೇಘನಾ, ದಾಮೋದರ್ ರಾವ್, ರಾಘವ ಕಲಾಲ್, ಸುರೇಶ್ ಸಾಯಿರಾಮ್, ಅಭಿಲಾಷ್, ಶರಣ್ ಗಿನಕೇರಿ, ಶಿವಮೊಗ್ಗ ರಾಮಣ್ಣ, ಸಿ.ಎನ್.ಪ್ರೀತಿ, ರಾಜೇಶ್ವರಿ ಪಾಂಡೆ, ಅರ್ಚನಾ ಶೆಟ್ಟಿ ಸೇರಿದಂತೆ ಹಲವಾರು ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/07/2022 01:04 pm

Cinque Terre

140.26 K

Cinque Terre

1

ಸಂಬಂಧಿತ ಸುದ್ದಿ