ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜುಲೈ 1 ಕ್ಕೆ ರಾಜ್ಯಾದ್ಯಂತ ಅಬ್ಬಬ್ಬ ಚಿತ್ರ ಬಿಡುಗಡೆ

ಹುಬ್ಬಳ್ಳಿ: ಕೆ.ಎಂ. ಚೈತನ್ಯ ಅವರ ನಿರ್ದೇಶನದ ಲಿಖಿತ್ ಶೆಟ್ಟಿ ನಾಯಕ ನಟನಾಗಿ, ನಾಯಕಿಯಾಗಿ ಅಮೃತ ಅಯ್ಯಂಗಾರ್ ನಟಿಸಿರುವ ಅಬ್ಬಬ್ಬ ಕಾಮಿಡಿ ಚಿತ್ರ ಜುಲೈ 1 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ನಟ ಲಿಖಿತ್ ಶೆಟ್ಟಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರದಲ್ಲಿ ಮೀರಾಮಾರ್ ಸಂಸ್ಥೆಯ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಬಾಲಕರ ಹಾಸ್ಟೆಲ್‌ನಲ್ಲಿ ನಡೆಯುವ ಕುತೂಹಲಕರವಾದ ಕಥಾಹಂದರ ಒಳಗೊಂಡಿದೆ. ಈ ಚಿತ್ರದಲ್ಲಿ ಅಜಯರಾಜ್, ತಾಂಡವರಾಮ್, ಧನರಾಜ್ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರು.

ಇನ್ನು ಈ ಚಿತ್ರವನ್ನು ತುಮಕೂರು ಸಿದ್ದಗಂಗಾ ಮಠದಲ್ಲಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಹಾಡುಗಳನ್ನು ಪಿಆರ್‌ಕೆ ಪ್ರೊಡಕ್ಷನ್ ಬಿಡುಗಡೆ ಮಾಡುತ್ತಿದೆ ಎಂದರು.

Edited By : Shivu K
Kshetra Samachara

Kshetra Samachara

24/06/2022 12:43 pm

Cinque Terre

13.29 K

Cinque Terre

0

ಸಂಬಂಧಿತ ಸುದ್ದಿ