ಹುಬ್ಬಳ್ಳಿ: ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ ವಿಂಡೋ ಸೀಟ್ ಸಿನಿಮಾವನ್ನು ಜುಲೈ 1ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಂಡೋ ಸೀಟ್ ರೊಮ್ಯಾಂಟಿಕ್ ತ್ರೀಲರ್ ಚಿತ್ರವಾಗಿದ್ದು, ಕೆಎಸ್ ಕೆ ಶೋರೀಲ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬಂದಿದೆ.
ನಾಯಕಿಯಾಗಿ ಸಂಜನಾ ಆನಂದ್, ಅಮೃತ ಅಯ್ಯಂಗಾರ್, ನಾಯಕನಾಗಿ ನಿರೂಪ್ ಭಂಡಾರಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ರವಿಶಂಕರ್, ಮಧುಸೂದನ್ ರಾವ್, ಲೇಖ ನಾಯ್ಡು, ʼಕಾಮಿಡಿ ಕಿಲಾಡಿʼ ಸೂರಜ್ ಮತ್ತಿತರರು ಅಭಿನಯಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.
Kshetra Samachara
23/06/2022 01:45 pm