ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಟನೆಯ ತ್ರಿವಿಕ್ರಮ ಚಲನಚಿತ್ರದ ಪ್ರಚಾರಾರ್ಥ ಇಡೀ ಚಿತ್ರತಂಡ ಮಂಗಳವಾರ ವಿದ್ಯಾಕಾಶಿ ಧಾರವಾಡಕ್ಕೆ ಬಂದಿತ್ತು.
ಧಾರವಾಡದ ಕರ್ನಾಟಕ ಕಾಲೇಜಿಗೆ ಬಂದ ನಟ ವಿಕ್ರಮ ರವಿಚಂದ್ರನ್, ನಾಯಕಿ ನಟಿ ಆಕಾಂಕ್ಷಾ ಶರ್ಮಾ ಹಾಗೂ ನಿರ್ದೇಶಕರನ್ನು ಕಂಡು ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರು ಅವರನ್ನು ಕಾಣಲು ಮುಗಿಬಿದ್ದಿದ್ದರು.
ಧಾರವಾಡದ ಕೆಸಿಡಿ ಕಾಲೇಜಿಗೆ ಬಂದ ನಟ, ನಟಿಯರು ತ್ರಿವಿಕ್ರಮದ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿ, ಸ್ಟೆಪ್ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಅಲ್ಲದೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಟ, ನಟಿಯರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.
Kshetra Samachara
14/06/2022 04:27 pm