ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಕಲಾವಿದರು ಅಭಿನಯದ ಕಂಡ್ಹಿಡಿ ನೋಡನ ಚಿತ್ರಕ್ಕೆ ಶೆಟ್ಟರ್ ಶುಭಹಾರೈಕೆ !

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಲಾವಿದರು ಅಭಿನಯಿಸಿರುವ ಕಂಡ್ಹಿಡಿ ನೋಡನ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಸುಧಾ ಚಿತ್ರಮಂದಿರಕ್ಕೆ ಭೇಟಿ ನೀಡಿ ಕಲಾವಿದರಿಗೆ ಶುಭಕೋರುವ ಮೂಲಕ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಹೌದು... ಸ್ಯಾಂಡಲ್ ವುಡ್ ನಲ್ಲಿ ಹುಬ್ಬಳ್ಳಿಯ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿರುವ ಚಿತ್ರಗಳಲ್ಲಿ ಒಂದಾಗಿರುವ ಕಂಡ್ಹಿಡಿ ನೋಡನ ಚಿತ್ರದಲ್ಲಿ ಖಳನಾಯಕ ನಟನಾಗಿ ರಾಘವೇಂದ್ರ ವದ್ದಿ ಅಭಿನಯಿಸಿದ್ದು, ಕಲ್ಲಪ್ಪ ಶಿರಕೋಳ ಅವರು ಕೂಡ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಪ್ರತಿಭೆಗಳ ಛಾಪು ಮೂಡಿಸಿದ್ದಾರೆ.

ಇನ್ನೂ ಸುರಿಯುವ ಮಳೆಯಲ್ಲಿಯೇ ಚಿತ್ರ ಮಂದಿರಕ್ಕೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಲಾವಿದರಿಗೆ ಶುಭಾಶಯಗಳನ್ನು ತಿಳಿಸಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

Edited By : Somashekar
Kshetra Samachara

Kshetra Samachara

20/05/2022 03:14 pm

Cinque Terre

25.68 K

Cinque Terre

0

ಸಂಬಂಧಿತ ಸುದ್ದಿ