ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೇ.20ಕ್ಕೆ ತೆರೆ ಮೇಲೆ ಕಂಡ್ಹಿಡಿ ನೋಡನ

ಹುಬ್ಬಳ್ಳಿ: ಶಶಿಕುಮಾರ್, ದಿವ್ಯಚಂದ್ರಧರ, ಯೋಗೇಶ್ ಕೆ ಗೌಡ ನಿರ್ಮಾಣದ, ಎಸ್ ಕೆ ನಾಗೇಂದ್ರ ಅರಸ್ ನಿರ್ದೇಶನ,ಪ್ರಣವ ಸೂರ್ಯ ಅಭಿನಯದ "ಕಂಡ್ಡಿಡಿ ನೋಡನ" ಚಿತ್ರ ಇದೇ ಮೇ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಲಂಡನ್ ಮತ್ತು ಜರ್ಮನಿಯಲ್ಲಿಯೂ ಈ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಟ ಪ್ರಣವ ಸೂರ್ಯ ಹೇಳಿದರು.ಇತ್ತೀಚೆಗಷ್ಟೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಚಿತ್ರದಲ್ಲಿ ಗಿರಿಜಾ ಲೋಕೇಶ್, ಜಯಸಿಂಹ ಮುಸುರಿ, ಮಂಜುರಾಜ್ ಸೂರ್ಯ, ಗಗನ, ಆದರ್ಶ ,ಅರುಣ್ ಭಾಗವತ್ ಹುಬ್ಬಳ್ಳಿಯ ಪ್ರತಿಭೆ ರಘು ವಡ್ಡಿ, ಹಾಗೂ ಕಲ್ಲಪ್ಪ ಶಿರಕೋಳ ಇದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ತಾಯಿ ಸೆಂಟಿಮೆಂಟ್ ಗೀತೆಯೊಂದನ್ನು ಹಾಡಿದ್ದಾರೆ, ಹಾಗೇ ರಾಜೇಶ್ ಕೃಷ್ಣನ್, ಜನಪದ ಗಾಯಕಿ ಹಾಗೂ ನಿರೂಪಕಿ ದಿವ್ಯ ಆಲೂರು ಚಿತ್ರದಲ್ಲಿ ಹಾಡಿದ್ದಾರೆ.

ಛಾಯಾಗ್ರಹಣ ವಿನೋದ್ ಜಯರಾಜ್ ಕೈ ಚಳಕದಲ್ಲಿ ಮೂಡಿ ಬಂದಿದೆ. ಶ್ರೀಧರ್ ಕಶ್ಯಪ್ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ.

ಸಂಕಲನ ಎನ್. ಎಮ್. ವಿಶ್ವ ಮಾಡಿದ್ದಾರೆಂದು ಹೇಳಿದರು.

Edited By : Shivu K
Kshetra Samachara

Kshetra Samachara

18/05/2022 05:36 pm

Cinque Terre

17.87 K

Cinque Terre

2

ಸಂಬಂಧಿತ ಸುದ್ದಿ