ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಚ್ಚನ ಮಾತು ಒಪ್ಪಿಕೊಂಡ ಸಿಎಂ-ಇಂಡಸ್ಟ್ರೀಯಿಂದ ಫುಲ್ ಬೆಂಬಲ !

ಹುಬ್ಬಳ್ಳಿ: ಕಿಚ್ಚ ಸುದೀಪ್ ಸಾಮಾನ್ಯವಾಗಿ ವಿವಾದಾತ್ಮಕ ಹೇಳಿಕೆಗಳನ್ನ ಕೊಡೋದೇ ಇಲ್ಲ. ಏನೇ ಮಾತನಾಡಿದ್ರು, ತಮ್ಮ ಗಟ್ಟಿ ಧ್ವನಿಗೆ ಶೋಭ ತರೋ ಹಾಗೆ ಮಾತನಾಡುತ್ತಾರೆ. ತೂಕದ ಮಾತುಗಳನ್ನೇ ಆಡಿ ಎಲ್ಲರ ಹೃದಯ ಕದ್ದು ಬಿಡ್ತಾರೆ. ಆದರೆ, ಅದ್ಯಾಕೋ ಏನೋ. ಬಾಲಿವುಡ್‌ನ ನಾಯಕ ನಟ ಅಜಯ್ ದೇವಗನ್ ಕಿಚ್ಚನ ಮಾತಿಗೆ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಹಾಗಂತ ಈ ಹೋರಾಟದಲ್ಲಿ ಈಗ ಕಿಚ್ಚ ಒಬ್ಬರೇ ಇಲ್ಲ. ಇಡೀ ಇಂಡಸ್ಟ್ರೀನೇ ಕಿಚ್ಚನ ಬೆಂಬಲಕ್ಕೆ ನಿಂತು ಬಿಟ್ಟಿದೆ.

ಸುದೀಪ್ ಮೊನ್ನೆ ಪ್ರೋಗ್ರಾವೊಂದರಲ್ಲಿ ಹೀಗಂದ್ರು, ಈಗ ಹಿಂದಿ ಭಾಷೆ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ. ಇದನ್ನ ಅವರು ಯಾವುದೇ ಕೆಟ್ಟ ಉದ್ದೇಶದಿಂದ ಹೇಳಿದಲ್ಲ ಬಿಡಿ. ಆದರೆ ಇದನ್ನ ಬಾಲಿವುಡ್ ನಟ ಅಜಯ್ ದೇವಗನ್‌ಗೆ ಬೇರೆ ರೀತಿಯಲ್ಲಿಯೇ ಹೇಳಿದಂತೆ ಇದೆ. ಅದಕ್ಕೇನೆ ಅಜಯ್ ದೇವಗನ್ ಸಿಟ್ಟಿಗೆದ್ದು, ಹಿಂದಿ ರಾಷ್ಟ್ರ ಭಾಷೆ ಆಗಿತ್ತು. ರಾಷ್ಟ್ರ ಭಾಷೆ ಆಗಿಯೇ ಮುಂದೆಯೂ ಉಳಿಯುತ್ತದ ಅಂತಲೇ ಟ್ವಿಟರ್ ನಲ್ಲಿ ಹಿಂದಿ ಭಾಷೆಯಲ್ಲಿಯೇ ಬರೆದು ಕಿಚ್ಚನಿಗೆ ಟಾಂಗ್ ಕೊಟ್ಟೇ ಬಿಟ್ಟರು ನೋಡಿ.

ಇದಕ್ಕೆ ಪ್ರತಿಯಾಗಿ ಕಿಚ್ಚನೂ ಸರಿಯಾಗಿಯೇ ಹೇಳಿದ್ದಾರೆ. ಆದರೆ, ಈ ಒಂದು ಟ್ವಿಟರ್ ವಾರ್, ಸುದೀಪ್ ಮತ್ತು ಅಜಯ್ ದೇವಗನ್ ಗೆ ಮಾತ್ರ ಸೀಮಿತವಾಗಿಲ್ಲ. ಅದು ಈಗ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಭಾಷಾ ಪ್ರೇಮವಾಗಿಯೇ ಪರಿವರ್ತನೆ ಆಗಿ ಬಿಟ್ಟಿದೆ. ಹೀಗಾಗಿಯೇ ಸುದೀಪ್ ಪರವಾಗಿಯೇ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ನಿಂತು ಬಿಟ್ಟಿದ್ದಾರೆ. ಸುದೀಪ್ ಹೇಳಿರೋದು ಸತ್ಯ ಅಂತಲೇ ಹೇಳಿ ಬಿಟ್ಟಿದ್ದಾರೆ.

ಸುದೀಪ್ ಮಾತಿಗೆ ಕನ್ನಡದ ನಟರೆಲ್ಲ ಬೆಂಬಲಿಸಿದ್ದಾರೆ.ನೀನಾಸಂ ಸತೀಶ್, ಶ್ರೀನಗರ ಕಿಟ್ಟಿ,ನಿರ್ದೇಶಕ ಅನೂಪ್ ಭಂಡಾರಿ ಸೇರಿದಮತೆ ಇಡೀ ಇಂಡಸ್ಟ್ರೀ ಕಿಚ್ಚನ ಬೆಂಬಲಕ್ಕೆ ನಿಂತು ಬಿಟ್ಟಿದೆ. ಜ್ಯೂನಿಯರ್ ಎನ್.ಟಿ.ಆರ್.ಫ್ಯಾನ್ಸ್,ಮಹೇಶ್ ಬಾಬು ಫ್ಯಾನ್ಸ್ ಕೂಡ ಕಿಚ್ಚನ ಮಾತು ಒಪ್ಪಿಕೊಂಡು ಬೆಂಬಲಕ್ಕೆ ನಿಂತಿದ್ದಾರೆ. ಹೀಗೆ ಭಾಷೆ ಅಂತ ಬಂದ್ರೆ, ದಕ್ಷಿಣದ ಎಲ್ಲ ನಟರು- ನಟಿಯರೂ ಒಂದಾಗಿ ಬಿಡ್ತಾರೆ ಅನ್ನೊದಕ್ಕೆ ಇದು ಸಾಕ್ಷಿ ಆಗಿದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2022 11:49 am

Cinque Terre

79.19 K

Cinque Terre

4

ಸಂಬಂಧಿತ ಸುದ್ದಿ