ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಲ್ಲಿ ರಕ್ತಾಭಿಷೇಕ ದಾಖಲೆ: ಕಿರುಚಿತ್ರದ ಟ್ರೈಲರ್ ಜನರು ಫುಲ್ ಪೀದಾ...!

ಹುಬ್ಬಳ್ಳಿ: ಕಿಶೋರ್ ಬಜಾಜ್ ನಿರ್ಮಾಣದ ರಕ್ತಾಭಿಷೇಕ ಕಿರು ಚಿತ್ರದ ಟ್ರೈಲರ್ ನಲ್ಲಿಯೇ ದಾಖಲೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದೆ.

ರಕ್ತಾಭಿಷೇಕ ಕಿರುಚಿತ್ರದ ಟ್ರೈಲರ್ ಉತ್ತರ ಕರ್ನಾಟಕ ಭಾಗದಲ್ಲಿಯೇ ಮೊದಲ 30 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿರುವ ಏಕೈಕ ಕಿರುಚಿತ್ರದ ಟ್ರೈಲರ್ ಆಗಿದೆ. ಅಲ್ಲದೇ ಧಾರವಾಡ ಟಾಕೀಸ್ ನಲ್ಲಿ ವಿನೂತನವಾಗಿ ನಿರ್ಮಾಣಗೊಂಡಿರುವ ರಕ್ತಾಭಿಷೇಕ ಪ್ರಸ್ತುತ ವಿದ್ಯಮಾನಗಳ ಹಾಗೂ ಸಮಾಜದ ಏಳುಬೀಳುಗಳನ್ನೇ ಕಥಾಹಂದಿರವನ್ನಾಗಿ ಮಾಡಿಕೊಂಡು ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದು, ಈಗ ಟ್ರೈಲರ್ ರಿಲೀಸ್ ನಲ್ಲಿಯೇ ದಾಖಲೆ ಬರೆದಿದೆ.

ಸೀನಿ ಪ್ರೀಯರು ಕಿರುಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಧಾರವಾಡ ಟಾಕೀಸ್ ನೇತೃತ್ವದಲ್ಲಿ, ಕಿಶೋರ್ ಬಜಾಜ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಸಾಕಷ್ಟು ಕಿರುಚಿತ್ರಗಳು ಬಿಡುಗಡೆಗೊಂಡು ಹೆಸರು ಮಾಡಿವೆ. ಈ ಹಿನ್ನೆಲೆಯಲ್ಲಿ ಈಗ ಮತ್ತಷ್ಟು ಕುತೂಹಲ ಕೆರಳಿಸುವ ವಿನೂತನ ಹಾಗೂ ವಿಭಿನ್ನ ಕಥಾಹಂದರಲ್ಲಿ ಮೂಡಿ ಬರುತ್ತಿರುವ ರಕ್ತಾಭಿಷೇಕ ಕಿರುಚಿತ್ರ ಟ್ರೈಲರ್ ಬಿಡುಗಡೆಯಲ್ಲಿಯೇ ಯೂಟ್ಯೂಬ್ ನಲ್ಲಿ 30 ಸಾವಿರಕ್ಕೂ ಅಧಿಕ ಮಟ್ಟದ ವೀಕ್ಷಣೆ ಮೂಲಕ ದಾಖಲೆ ನಿರ್ಮಾಣ ಮಾಡಿದೆ. ಧಾರವಾಡ ಜಿಲ್ಲೆಯನ್ನೇ ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡು ಇಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಚಿತ್ರದ ಮೂಲಕವೇ ಸಾಮಾಜಿಕ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಧಾರವಾಡ ಟಾಕೀಸ್ ಹಾಗೂ ಕಿಶೋರ್ ಬಜಾಜ್ ಸನ್ನದ್ಧರಾಗಿದ್ದಾರೆ. ಟ್ರೈಲರ್ ಮೂಲಕವೇ ಸದ್ದು ಮಾಡಿದ್ದು, ಶೀಘ್ರವಾಗಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನಗೊಳ್ಳಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/04/2022 07:31 pm

Cinque Terre

84.33 K

Cinque Terre

14

ಸಂಬಂಧಿತ ಸುದ್ದಿ