ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಲ್ಲಮ ಪ್ರಭು ಜೀವನಾಧಾರಿತ ಚಿತ್ರ ರಿಲೀಸ್ ಗೆ ಸಿದ್ಧ; ಶ್ರೀಗಳ ಶುಭ ಹಾರೈಕೆ

ಹುಬ್ಬಳ್ಳಿ: ಹನ್ನೆರಡನೆಯ ಶತಮಾನದ 'ಅನುಭವ ಮಂಟಪ'ದ ಅನುಭವವನ್ನು ಜನರಿಗೆ ಉಣಬಡಿಸುವ ಸದುದ್ದೇಶದಿಂದ ಚಿತ್ರವೊಂದು ಮೂಡಿ ಬರುತ್ತಿದೆ. ಉತ್ತರ ಕರ್ನಾಟಕದವರೇ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ರಿಲೀಸ್ ಗೆ ಸಿದ್ಧವಾಗಿದೆ.

ಹನ್ನೆರಡನೆಯ ಶತಮಾನದ ವಚನಕಾರರಾದ ಶ್ರೀ ಅಲ್ಲಮ ಪ್ರಭು ಅವರ ಜೀವನಾಧಾರಿತ ಚಿತ್ರ ವ್ಯೋಮಕಾಯ್ ಸಿದ್ಧ ಶ್ರೀ ಅಲ್ಲಮ ಪ್ರಭು ಶೂನ್ಯ ಸಿಂಹಾಸನಾಧೀಶ್ವರ ಎಂಬುವಂತಹ ಶೀರ್ಷಿಕೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರ ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ರಿಲೀಸ್ ಗೆ ಸಿದ್ಧವಾಗಿದೆ. ಆಡಿಯೋ ಬಿಡುಗಡೆಯಾಗಿದೆ.

ಚಿತ್ರವನ್ನು ಮಹಾವೀರ ಪ್ರಭು ನಿರ್ಮಾಣ ಮಾಡಿದ್ದು, ಮಾಧವಾನಂದ ಶೇಗುಣಸಿ ಕಥೆ-ಚಿತ್ರಕಥೆ ಬರೆದಿದ್ದಾರೆ. ನಾಯಕ ನಟನಾಗಿ ಸಚಿನ್ ಸುವರ್ಣ ಅಭಿನಯಿಸಿದ್ದು, ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಶ್ರೀಗಳು ಶುಭ ಕೋರಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

Edited By : Manjunath H D
Kshetra Samachara

Kshetra Samachara

04/04/2022 04:44 pm

Cinque Terre

115.01 K

Cinque Terre

8

ಸಂಬಂಧಿತ ಸುದ್ದಿ