ಹುಬ್ಬಳ್ಳಿ: ಜೇಮ್ಸ್ ಬಿಡುಗಡೆ ಒಂದು ಕಡೆಯಾದರೆ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಮತ್ತೊಂದು ಕಡೆಗೆ. ಈ ಎಲ್ಲ ಸಂಭ್ರಮವನ್ನು ಹುಡುಗರಷ್ಟೇ ಅಲ್ಲದೆ ಮಹಿಳಾ ಫ್ಯಾನ್ಸ್ ಕೂಡ ಅದ್ದೂರಿಯಾಗಿ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದ್ದಾರೆ.
ಹೌದು. ಹುಬ್ಬಳ್ಳಿಯ ಅಪ್ಸರಾ ಥಿಯೇಟರ್ ಮುಂದೆ ಪುರುಷರಿಗೆ ನಾವೇನೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಪುನೀತ್ ಅಭಿಮಾನಿಗಳಾದ ಹುಡುಗಿಯರು ಸಖತ್ ಸ್ಟೆಪ್ ಹಾಕಿದ್ದಾರೆ. ಇನ್ನೂ ಮಹಿಳೆಯರು ಕುಣಿಯೋಕೆ ಸ್ಟಾರ್ಟ್ ಮಾಡಿದ್ದೇ ತಡ ಎಲ್ಲರೂ ಚಪ್ಪಾಳೆ ಹಾಗೂ ವಿಶಲ್ ಹಾಕುವ ಮೂಲಕ ಪ್ರೋತ್ಸಾಹ ನೀಡಿದರು.
ಇನ್ನೂ ವಾಣಿಜ್ಯನಗರಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪುನೀತ್ ಹುಟ್ಟು ಹಬ್ಬಕ್ಕೆ ಹಾಗೂ ಜೇಮ್ಸ್ ಚಿತ್ರಕ್ಕೆ ಸಾಕಷ್ಟು ಮೆರುಗು ಸಿಕ್ಕಿರುವುದು ವಿಶೇಷವಾಗಿದೆ.
Kshetra Samachara
17/03/2022 04:54 pm