ಹುಬ್ಬಳ್ಳಿ: ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುರಾಜ ಜ್ಯೇಷ್ಠ ಅವರ ಚೊಚ್ಚಲ ನಿರ್ದೇಶನದ ಹರೀಶ ವಯಸ್ಸು 36 ಚಿತ್ರ ಮಾರ್ಚ್ 11 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಗುರುರಾಜ ಜ್ಯೇಷ್ಠ ಹೇಳಿದರು...
ಈ ಚಿತ್ರ ಹಗಲು ಕನಸು ಕಾಣೋ ಹುಡುಗ. ಅವನ ಜೀವನದಲ್ಲಿ ನಡೆಯುವ ತಿರುವುಗಳನ್ನು ಕತೆಯಾಗಿ ಹೆಣೆದು ಎಲ್ಲಾ ವಯೋಮಾನದ ಪ್ರೇಕ್ಷಕರಿಗಾಗಿ, ಕೌಟುಂಬಿಕ ಮನರಂಜನಾ ಚಿತ್ರವೇ ಹರೀಶ ವಯಸ್ಸು 36 ಎಂದು ಹೇಳಿದರು.
ಈ ಚಿತ್ರದಲ್ಲಿ ವಿಶೇಷವಾಗಿ ಪುನೀತರಾಜಕುಮಾರ ಅವರು ಒಂದು ಹಾಡನ್ನು ಹಾಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ಕಲಾವಿದ ಎಂ.ಎಸ್ ಉಮೇಶ ನಟನೆ ಮಾಡಿದ್ದಾರೆ. ನಾಯಕನಾಗಿ ಯೋಗೇಶ ಶೆಟ್ಟಿ, ನಾಯಕಿಯಾಗಿ ಶ್ವೇತಾ ಅರೆಹೊಳೆ ನಟನೆ, ರೋಹಿನಿ ಜಗರಾಮ್, ಪ್ರಕಾಶ ತೂಮಿನಾಡು, ರಕ್ಷಣ್ ಮಡೂರ್, ಶೋಭಾ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು ನಟನೆ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/03/2022 08:53 pm