ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೂ ನನಗೂ ರಂಗಭೂಮಿ ಇಂದಲೇ ನಂಟಿದೆ. ಈ ಭಾಗದ ಕಡೆ ಚಿತ್ರೀಕರಣ ಮಾಡಲು ನನಗೆ ತುಂಬಾ ಇಷ್ಟ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಟ್ನಿ ಅಂದರೆ ಸಖತ್ ಇಷ್ಟ ಆಗುತ್ತದೆ ಎಂದು ನಟ ಅಶ್ವತ್ ನಿನಾಸಮ್ ಪಬ್ಲಿಕ್ ನೆಕ್ಸ್ಟ್ ಮೂಲಕ ತಿಳಿಸಿದ್ದಾರೆ.
ನಗರದಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, 'ನರಗುಂದ ಬಂಡಾಯ'ದಂತಹ ಚಿತ್ರ ನೋಡಿದರೆ ರೋಮಾಂಚನ ಆಗುತ್ತದೆ. ಇದರಲ್ಲಿ ಪಾತ್ರ ಮಾಡಿದ್ದು, ನನಗೆ ತುಂಬಾ ಖುಷಿ ತಂದಿದೆ. ರೈತರು ಪಟ್ಟ ಕಷ್ಟ, ರೈತರ ಹತ್ಯೆ ಕೇಳಿದ್ದೆ ಅಷ್ಟೇ. ಚಿತ್ರದಲ್ಲಿ ಇದನ್ನೆಲ್ಲ ನೋಡಿ ಕಣ್ಣಲ್ಲಿ ನೀರು ಬಂದಿದೆ ಎಂದು ಚಿತ್ರದ ಬಗ್ಗೆ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/03/2022 07:35 pm