ಹುಬ್ಬಳ್ಳಿ: 'ಏಕ್ ಲವ್ ಯಾ' ಸಿನಿಮಾ ರೆಸ್ಪಾನ್ಸ್ ತುಂಬಾ ಚೆನ್ನಾಗಿದೆ. ಹೌಸ್‌ಫುಲ್ ಬೋರ್ಡ್ ನೋಡಿ ಬಹಳ ಖುಷಿಯಾಗಿದೆ ಎಂದು ಚಿತ್ರದ ನಿರ್ಮಾಪಕಿ ಹಾಗೂ ನಟಿ ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಮಾಪಕಿಯಾಗಿ ತುಂಬಾ ಖುಷಿಯಾಗಿದೆ. ಮೊದಲು ಮೈಸೂರು ಮಂಡ್ಯ, ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮೋಷನ್‌ಗೆ ಬಂದಿದ್ದೇವೆ. ಇಲ್ಲಿಯೂ ಸಿನಿಮಾ ಹೌಸ್ ಫುಲ್ ಆಗಿದೆ ಎಂದರು.
ನನಗೆ ಭಯ ಇತ್ತು. ನನ್ನ ತಮ್ಮನನ್ನು ಜನ ಒಪ್ಪಿಕೊಳ್ಳುತ್ತಾರೋ ಇಲ್ವೋ ಅಂತ. ಕೊನೆಗೂ ಜನ ಒಪ್ಕೊಂಡಿದ್ದಾರೆ. ಹೀಗಾಗಿ ತುಂಬಾ ಖುಷಿಯಾಗಿದೆ. ಎಲ್ಲರೂ ದಯವಿಟ್ಟು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ. ಪೈರಸಿ ಬಹಳ ಜೋರಾಗಿದ್ದು, ಇದನ್ನು ಮಾಡಬಾರದು. ಟೆಲಿಗ್ರಾಂನಲ್ಲಿಯೂ ಕೂಡ ಲಿಂಕ್ ಲೀಕ್ ಆಗುತ್ತಿದೆ. ಯಾವುದೇ ಚಿತ್ರ ಇರಲಿ ಥಿಯೇಟರ್‌ಗೆ ಹೋಗಿ ನೋಡಿ. ಪೈರಸಿಯಿಂದ ತುಂಬಾ ಬೇಜಾರ್ ಆಗುತ್ತಿದೆ ಎಂದು ಹೇಳಿದರು.
Kshetra Samachara
01/03/2022 06:32 pm