ಹುಬ್ಬಳ್ಳಿ: ಶ್ರೀ ಪಾಂಡವ ಸಿನಿ ಕಂಬೈನ್ಸ್ ವತಿಯಿಂದ 'ನನ್ ಜೊತೆ ಪೂಜಾಲಕ್ಷ್ಮೀ' ಚಲನಚಿತ್ರವು ಇದೇ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಯೇಶು, ಯುವ ನಟಿ ಆಹಾರಿಕಾ ನಾಯ್ಕ್ ಹೇಳಿದ್ದಾರೆ.
ಈ ಚಿತ್ರವು 50 ದಿನಗಳವರೆಗೆ ಮಡಿಕೇರಿ, ತುಮಕೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದ್ದು, ಇದೊಂದು ನೈಜ ಘಟನೆಯ ಆಧಾರಿತ ಚಿತ್ರವಾಗಿ. 50 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದ್ದು, ಇದೊಂದು ಕೌಟುಂಬಿಕ ಚಿತ್ರವಾಗಿದೆ. ಚಿತ್ರದಲ್ಲಿ 4 ಪೈಟ್ ಇದ್ದು, ಈಗಾಗಲೇ 3 ಹಾಡುಗಳು ಸೂಪರ್ ಹಿಟ್ ಆಗಿದ್ದು, ಬಾಕಿ 2 ಹಾಡುಗಳು ಬಿಡುಗಡೆಯಾಗಲಿದೆ ಎಂದರು.
ಇನ್ನೂ ಚಿತ್ರಕ್ಕೆ ವೆಂಕಟರಮಣಪ್ಪ, ಶಶಿಕುಮಾರ್, ಮಣಿ, ವೆಂಕಟೇಶ ಚಿತ್ರದ ನಿರ್ಮಾಪಕರಾಗಿದ್ದು, ಸಹ ನಿರ್ಮಾಪಕ ಬಿ.ಟಿ.ಎನ್. ರಾಮು, ಚಿತ್ರದ ನಿರ್ದೇಶನವನ್ನು ಅಜಿತರಾಯ್ ಮಾಡಿದ್ದಾರೆ. ಸಂಗೀತ ಸಂಯೋಜನೆಯನ್ನು ಪ್ರತೀಕ ಶೆಟ್ಟಿ ನೀಡಿದ್ದಾರೆ ಎಂದರು. ವಿವೇಕ್, ಕಾಂತರಾಜ, ಹಂಸ, ಹರೀಶ್, ಪ್ರವೀಣ್ ಸೇರಿದಂತೆ ಹೊಸ ಕಲಾವಿದರು ಅಭಿನಯಿಸಿದ್ದಾರೆ.
Kshetra Samachara
22/02/2022 01:41 pm