ಹುಬ್ಬಳ್ಳಿ: ಮಲೆಯಾಳಂ ನಟ ಬೋಬನ್ ಪೋಸ್ಟಮ್ಯಾನ್ ಆಗಿ ಬಿಂಬಿತಗೊಂಡಿರೋ ವಿವಾದ ಇದೀಗ ಹುಬ್ಬಳ್ಳಿಯತ್ತ ತಿರುಗಿದೆ. ಹುಬ್ಬಳ್ಳಿಯ ವಿದ್ಯಾಮಂದಿರ ಬುಕ್ ಡಿಸ್ಟ್ರಿಬ್ಯೂಟರ್ ತಂದಿರೋ ಪುಸ್ತಕದಲ್ಲಿ ಬೋಬನ್ ಪೋಸ್ಟಮ್ಯಾನ್ ಆಗಿದ್ದು, ತಮಿಳುನಾಡು ಪಬ್ಲಿಷರ್ ಮಾಡಿದ ಎಡವಟ್ಟು ಮೂಲ ಕಾರಣವಾಗಿದೆ.
ಹೌದು. ಕುಂಚಾಕೋ ಬೋಬನ್ ಪೋಸ್ಟ್ ಮ್ಯಾನ್ ವಿವಾದ ಹುಬ್ಬಳ್ಳಿಯತ್ತ ತಿರುಗಿದೆ. ವಿವಾದ ಸೃಷ್ಟಿಗೆ ಕಾರಣವಾಗಿರೋ ಪುಸ್ತಕದ ಡಿಸ್ಟ್ರಿಬ್ಯೂಟರ್ ಹುಬ್ಬಳ್ಳಿಯವರೇ ಆಗಿದ್ದಾರೆ. ವಿಚಿತ್ರವೆಂದರೆ ಈ ವಿಚಾರ ಸ್ವತಃ ಡಿಸ್ಟ್ರಿಬ್ಯೂಟರ್ ಗೇ ಗೊತ್ತಿಲ್ಲ. ತಮಿಳುನಾಡು ಮೂಲದ ಪ್ರಕಾಶ ಮಾಡಿದ ಎಡವಟ್ಟೇ ಇಷ್ಟೆಲ್ಲಕ್ಕೂ ಕಾರಣವಾಗಿದೆ. ಒಂದು ಫೋಟೋ ಕರ್ನಾಟಕ, ತಮಿಳುನಾಡು, ಕೇರಳಗಳಿಗೆ ತಳುಕು ಹಾಕಿಕೊಂಡು ಚರ್ಚೆಗೆ ಕಾರಣವಾಗಿದೆ.
ಮಲೆಯಾಳಂ ನಟ ಕುಂಚಾಕೋ ಬೋಬನ್ ಗೂ ಹುಬ್ಬಳ್ಳಿಗೂ ಎತ್ತಣದೆತ್ತ ಸಂಬಂಧ ಎನ್ನಬಹುದು. ಹಾಗೆ ನೋಡಿದ್ರೆ ಹುಬ್ಬಳ್ಳಿ ಜನತೆಗೆ ಈ ಬೋಬನ್ ಯಾರಂತಾನೇ ಅಷ್ಟಾಗಿ ಗೊತ್ತಿಲ್ಲ. ಆದ್ರೆ ಕುಂಚಾಕೋ ಬೋಬನ್ ತನ್ನ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರೋ ಪೋಸ್ಟ್ ನಿಂದಾಗಿ ಹುಬ್ಬಳ್ಳಿಯೂ ಚರ್ಚೆಗೆ ಬರುವಂತಾಗಿದೆ. ಕುಂಚಾಕೋ ಬೋಬನ್ ಪೋಸ್ಟ್ ಮ್ಯಾನ್ ಆಗಿ ಬಿಂಬಿತಗೊಂಡಿರೋದೇ ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ.
ಆಗಿರೋದಿಷ್ಟೇ.. ಹುಬ್ಬಳ್ಳಿಯ ವಿದ್ಯಾಮಂದಿರ ಬುಕ್ ಡಿಸ್ಟ್ರಿಬ್ಯೂಟರ್ ಪ್ರಕಟಿಸಿರೋ ಪುಸ್ತಕದಲ್ಲಿ ಕುಂಚಾಕೋ ಬೋಬನ್ ಪೋಸ್ಟ್ ಮ್ಯಾನ್ ಆಗಿ ಬಿಂಬಿತಗೊಂಡಿದ್ದಾನೆ. ಆಲ್ ಇನ್ ಒನ್ ಅಂಕಲಿಪಿಯಲ್ಲಿ ಬೋಬನ್ ಭಾವಚಿತ್ರ ಪ್ರಕಟಗೊಂಡಿದೆ. ನಮ್ಮ ಸಹಾಯಕರು ಎಂದು ಸಮಾಜದಲ್ಲಿ ವಿವಿಧ ವೃತ್ತಿಗಳನ್ನು ಭಾವಚಿತ್ರಗಳ ಮೂಲಕ ತೋರಿಸಲು ಮಾಡಿರೋ ಪ್ರಯತ್ನದ ವೇಳೆ ಪ್ರಕಾಶ ಎಡವಟ್ಟು ಮಾಡಿದ್ದಾನೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೂ ಮುಜುಗರದ ಪರಿಸ್ಥಿತಿ ಬಂದಿದೆ.
ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡ ನಂತರ ಚರ್ಚೆ ಮುನ್ನಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ತಮಿಳುನಾಡು ಮೂಲದ ಪಬ್ಲಿಷರ್ ಮಾಡಿರೋ ಅವಾಂತರ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯ ವಿದ್ಯಾಮಂದಿರ ಬುಕ್ ಡಿಸ್ಟ್ರಿಬ್ಯೂಟರ್ ಗೆ ಕುಂಚಾಕೋ ಬೋಬನ್ ಭಾವಚಿತ್ರ ಪ್ರಕಟಗೊಂಡಿರೋ ಮಾಹಿತಿಯೇ ಇಲ್ಲ. ಕುಂಚಾಕೋ ಬೋಬನ್ ಯಾರಂತಾನೇ ನಮಗೆ ಗೊತ್ತಿಲ್ಲ. ವಿವಾದವಾದ ನಂತರ ಪುಸ್ತಕ ಗಮನಿಸಿದೆ. ತಮಿಳುನಾಡು ಮೂಲದ ಶಿವಕಾಶಿಯ ಶ್ರೀ ಶಕ್ತಿ ಪಬ್ಲಿಕೇಷನ್ ನಮಗೆ ಪುಸ್ತಕ ಮುದ್ರಿಸಿಕೊಟ್ಟಿದೆ.
ಒಟ್ಟಾರೆ ಬೋಬನ್ ಪ್ರಕರಣದಿಂದಾಗಿ ಹುಬ್ಬಳ್ಳಿಯೂ ಚರ್ಚೆಗೆ ಬಂದಿದೆ. ಕನ್ನಡ, ಆಂಗ್ಲ ಮತ್ತು ಹಿಂದಿ ತ್ರಿ ಭಾಷೆಗಳಲ್ಲಿ ಪ್ರಕಟಗೊಂಡಿರೋ ಆಲ್ ಇನ್ ಒನ್ ಪುಸ್ತಕ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ರಾಜ್ಯ ಸರ್ಕಾರವೂ ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದೆ.
Kshetra Samachara
04/02/2022 02:32 pm