ಧಾರವಾಡ: ಧಾರವಾಡದ ಶ್ರೀನಿವಾಸ ಚಿತ್ರಮಂದಿರಕ್ಕೆ ಸೋಮವಾರ ಡಾಲಿ ಧನಂಜಯ ಭೇಟಿ ನೀಡಿದರು.
ತಾವು ನಾಯಕ ನಟರಾಗಿ ಅಭಿನಯಿಸಿರುವ 'ಬಡವ ರಾಸ್ಕಲ್' ಚಿತ್ರದ ಪ್ರಚಾರಾರ್ಥ ಡಾಲಿ ಧನಂಜಯ ಅವರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಅದೇ ರೀತಿ ಧಾರವಾಡದ ಶ್ರೀನಿವಾಸ ಚಿತ್ರಮಂದಿರಕ್ಕೂ ಅವರು ಭೇಟಿ ನೀಡಿದ್ದರು.
ಡಾಲಿ ಅವರು ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆ ಅವರ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ಅಲ್ಲದೇ ಡೈಲಾಗ್ ಹೇಳುವಂತೆಯೂ ಮನವಿ ಮಾಡಿದರು. ಅಭಿಮಾನಿಗಳ ಆಸೆಯಂತೆ ಧನಂಜಯ ಅವರು ಡೈಲಾಗ್ ಕೂಡ ಹೇಳಿ ತಮ್ಮ ಅಭಿಮಾನಿಗಳನ್ನು ರಂಜಿಸಿ ಅಲ್ಲಿಂದ ತೆರಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/01/2022 01:22 pm