ಹುಬ್ಬಳ್ಳಿ: ಜಾತಿ ಧರ್ಮಕ್ಕಿಂತ ಸ್ನೇಹ ಪ್ರೀತಿ ದೊಡ್ಡದು, ಸ್ನೇಹ ಪ್ರೀತಿಗಿಂತ ಮಾನವೀಯ ದೊಡ್ಡದು ಎಂಬ ನಾನುಡಿಯಂತೆ ಕಥಾಹಂದರ ಹೊಂದಿರುವ ಗೋರಿ ಚಿತ್ರ ನ.26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಗೋಪಾಲಕೃಷ್ಣ ಹೊಮ್ಮರಡಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಹಾವೇರಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ಗೋರಿ ಚಿತ್ರವನ್ನು ಉತ್ತರ ಕರ್ನಾಟಕ ಭಾಗದ ಕಲಾವಿದರೇ ನಿರ್ಮಿಸಲಾಗಿದೆ. ಈಗಾಗಲೇ ಚಿತ್ರದ ಹಾಡುಗಳಿಂದ ಹೆಚ್ಚು ಗಮನ ಸೆಳೆದಿವೆ. ಚಿತ್ರದಲ್ಲಿ ನಾಯಕನಾಗಿ ಕಿರಣ ಹಾವೇರಿ, ನಾಯಕಿಯಾಗಿ ಸ್ಮೀತಾ ನಟಿಸಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆ ಮಾಡಿರುವ ಚಿತ್ರದ ಹಾಡುಗಳಿಗೆ ಪ್ರೇಮ ಕವಿ ಕೆ.ಕಲ್ಯಾಣ, ಶಿವು ಬೇರ್ಗಿ, ಎಂ.ಹೆಚ್ ಜಗ್ಗೀನ್ ಸಾಹಿತ್ಯ ಬರೆದಿದ್ದಾರೆ. ನಟರಾದ ಶಿವರಾಜ್ ಕುಮಾರ್, ದರ್ಶನ, ಧ್ರುವ ಸರ್ಜಾ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಸಪೋರ್ಟ್ ಆಗಿ ಶುಭಕೋರಿದ್ದಾರೆ ಎಂದರು.
Kshetra Samachara
22/11/2021 03:09 pm