ಧಾರವಾಡ: ದೀಪಾವಳಿ ಹೊಸ್ತಿಲಲ್ಲಿ ಡಾ.ರಾಜಕುಮಾರ ಅವರ ಕೊನೆಯ ಪುತ್ರ ಪುನೀತ್ ರಾಜಕುಮಾರ ಅವರನ್ನು ಕಳೆದುಕೊಂಡು ಇಡೀ ಕರುನಾಡು ಅಕ್ಷರಶಃ ಬಡವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಬೈಠಕ್‌ನ ಕೊನೆಯ ದಿನವಾದ ಇಂದು ಸುದ್ದಿಗೋಷ್ಠಿ ಮೂಲಕ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪುನೀತ್ ಅವರೊಬ್ಬ ಮೇರು ನಟರಾಗಿದ್ದರು. ದೀಪಾವಳಿ ಸಂಭ್ರಮ ಮುಂದೆ ಇರುವಾಗ ಪುನೀತ್ ಅವರ ಅಕಾಲಿಕ ನಿಧನದಿಂದ ಇಡೀ ರಾಜ್ಯದಲ್ಲಿ ಶೋಕ ಆವರಿಸಿದಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ರಾಜ್ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದಿದ್ದಾರೆ.
Kshetra Samachara
30/10/2021 12:58 pm