ಹುಬ್ಬಳ್ಳಿ: ಯಾವುದಾದರೂ ಸ್ಟಾರ್ ನಟರ ಸಿನಿಮಾ ಬಿಡುಗಡೆ ಆಯ್ತು ಅಂದರೆ ಸಾಕು ಅಭಿಮಾನಿಗಳು ಪಟಾಕಿ, ಕ್ಷೀರಾಭಿಷೇಕ ಹೀಗೆ ಹಲವಾರು ರೀತಿಯಲ್ಲಿ ಹಣವನ್ನು ಖರ್ಚು ಮಾಡಿ ಅಭಿಮಾನ ಪ್ರದರ್ಶನ ಮಾಡುತ್ತಿದ್ದರು. ಆದರೆ ಹುಬ್ಬಳ್ಳಿಯ ಅಭಿಮಾನಿಗಳು ಮಾತ್ರ ಓದುವ ಬಡ ಯುವಕರ ಬಾಳಿಗೆ ಆಸರೆಯಾಗುವ ಕಾರ್ಯವನ್ನು ಮಾಡಿದ್ದಾರೆ.
ಬಹುನಿರೀಕ್ಷಿತ ಭಜರಂಗಿ 2 ಚಲನಚಿತ್ರ ಬಿಡುಗಡೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಶಿವರಾಜಕುಮಾರ ಅಭಿಮಾನಿಗಳಿಂದ ವಿಭಿನ್ನವಾಗಿ ಚಲನಚಿತ್ರಕ್ಕೆ ಸ್ವಾಗತಿಸಿದರು. ಜೈ ರಾಜವಂಶ ಅಭಿಮಾನಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಪುಸ್ತಕ ವಿತರಣೆ ಮಾಡುವ ಮೂಲಕ ಅದ್ದೂರಿಯಾಗಿ ಭಜರಂಗಿ-2 ಸಿನಿಮಾಗೆ ಸ್ವಾಗತ ಕೋರಿದರು.
ಇನ್ನೂ 50 ಸಾವಿರ ಮೌಲ್ಯದ ವಿವಿಧ ಪುಸ್ತಕಗಳನ್ನು ಕನಸು ಎಂಬ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರಕ್ಕೆ ಪುಸ್ತಕ ವಿತರಣೆ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಠಿಯಿಂದ ವಿಭಿನ್ನ ಪ್ರಯತ್ನವೊಂದನ್ನು ಮಾಡಿದ್ದಾರೆ.
ವಿವಿಧ ಪಠ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ವಿತರಣೆ ಮಾಡಿದ ಅಭಿಮಾನಿಗಳು ಕ್ಷೀರಾಭಿಷೇಕ, ಪಟಾಕಿ ಯಾವುದೇ ಆಡಂಭರವಿಲ್ಲದೇ ವಿಭಿನ್ನ ರೀತಿಯಲ್ಲಿ ಚಿತ್ರಕ್ಕೆ ಸ್ವಾಗತಿಸಿರುವುದು ಸಾಕಷ್ಟು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.
Kshetra Samachara
29/10/2021 02:37 pm