ಧಾರವಾಡ: ಕಲೆ ಎನ್ನುವುದು ಯಾರ ಸ್ವತ್ತೂ ಅಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ, ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ಇಲ್ಲದೇ ಅನೇಕ ಪ್ರತಿಭೆಗಳು ಕಮರಿ ಹೋಗುತ್ತಿವೆ. ಹೀಗಾಗಿಯೇ ನಟನೆಯಲ್ಲಿ ಆಸಕ್ತಿ ವಹಿಸಿ ನಟರಾಗಬೇಕು ಎಂಬ ಆಸೆ ಇಟ್ಟುಕೊಂಡವರಿಗೆ ಧಾರವಾಡದಲ್ಲೇ ಹುಟ್ಟಿಕೊಂಡಿರುವ ಧಾರವಾಡ ಟಾಲ್ಕಿಸ್ ಇದೀಗ ವೇದಿಕೆ ಕಲ್ಪಿಸಿದೆ.
ಹೀಗಾಗಿಯೇ ಅನೇಕ ಪ್ರತಿಭೆಗಳನ್ನು ಗುರುತಿಸುವುದಕ್ಕೋಸ್ಕರ ಧಾರವಾಡದ ಬೇಂದ್ರೆ ಭವನದ ಹಿಂಭಾಗದಲ್ಲಿರುವ ಪ್ರಕೃತಿ ಸೇವಾ ಟ್ರಸ್ಟ್ ಹಾಗೂ ಧಾರವಾಡ ರಂಗಾಯಣದಲ್ಲಿ ಆಡಿಷನ್ ಹಮ್ಮಿಕೊಳ್ಳಲಾಗಿತ್ತು. ಈ ಆಡಿಷನ್‌ಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಯುವ ಕಲಾವಿದರು ಬಂದು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರು. ಈ ಆಡಿಷನ್‌ನಲ್ಲಿ ಆಯ್ಕೆಯಾದ ಕಲಾವಿದರಿಗೆ ಸ್ವತಃ ಧಾರವಾಡ ಟಾಲ್ಕಿಸ್ ವೇದಿಕೆ ಕಲ್ಪಿಸಿಕೊಡಲಿದೆ ಎಂಬುದು ವಿಶೇಷ.
ಇನ್ನು ಈ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ಕಲಾವಿದರೂ ಕೂಡ ಪಾಲ್ಗೊಂಡಿದ್ದು, ಧಾರವಾಡದಲ್ಲೇ ಕಲಾವಿದರಿಗಾಗಿ ಈ ವೇದಿಕೆ ಸೃಷ್ಟಿಯಾಗಿದ್ದಕ್ಕೆ ಸಂತಸ ಹಂಚಿಕೊಂಡಿದ್ದಾರೆ.
ಪ್ರತಿಭೆ ಇದ್ದರೂ ಅದನ್ನು ಪ್ರದರ್ಶನ ಮಾಡುವುದಕ್ಕಾಗಿ ಹಾಗೂ ನಟನೆಗಾಗಿ ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಧಾರವಾಡ ಟಾಲ್ಕಿಸ್ ಇದೀಗ ಹುಬ್ಬಳ್ಳಿ, ಧಾರವಾಡ ಅಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ನಟನೆ, ಹಾಡುಗಾರಿಕೆ, ಟೆಕ್ನಿಷಿಯನ್ ಸೇರಿದಂತೆ ವಿವಿಧ ವಿಭಾಗಗಲ್ಲಿ ಅವಕಾಶ ನೀಡಲು ಮುಂದಾಗಿದೆ. ಗುರುವಾರ ನಡೆದ ಆಡಿಷನ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.
Kshetra Samachara
28/10/2021 05:49 pm