ಹುಬ್ಬಳ್ಳಿ: ನಟ ಕಿಚ್ಚ ಸುದೀಪ್ ಅವರ ಕನ್ನಡದ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ 3 ಚಿತ್ರ ರದ್ದಾಗಿರುವುದರಿಂದ ಅಭಿಮಾನಿಗಳು ಬೇಸತ್ತು ಹೋಗಿದ್ದಾರೆ.
ಕೋರೊನಾ ಮಹಾಮಾರಿಗೆ ಎಲ್ಲ ಚಿತ್ರ ಮಂದಿರಗಳು ಬಂದ್ ಆಗಿದ್ದವು, ಆದ ಕಾರಣ ಜನರಿಗೂ ಕೂಡ ಮನರಂಜನೆ ಇಲ್ಲದೆ ಮಂಕಾಗಿದ್ದರು, ಇಂದು ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಡಬಲ್ ಧಮಾಕಾ ಕೊಟ್ಟಿದ್ದ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರ ಯಾವುದೇ ತಾಂತ್ರಿಕ ದೋಷದಿಂದ ಬಂದ್ ಮಾಡಿದ್ದಾರೆ. ಇದರಿಂದ ಹುಬ್ಬಳ್ಳಿ ಅಭಿಮಾನಿಗಳು ಮನೆಯತ್ತ ಮುಖ ಮಾಡಿದ್ದಾರೆ.
ಹುಬ್ಬಳ್ಳಿಯ ಸುಜಾತಾ ಚಿತ್ರಮಂದಿರದಲ್ಲಿ ಪ್ರದರ್ಶನವಾಗಬೇಕಿದ್ದ ಚಿತ್ರ, ಶೋ ರದ್ದಾಗಿದಕ್ಕೆ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇದರಿಂದ ಪೊಲೀಸರು ಹಾಗೂ ಚಿತ್ರಮಂದಿರದ ಸಿಬ್ಬಂದಿಗಳಿಂದ ಪೇಕ್ಷಕರ ಮನವೊಲಿಸಿ,ಟಿಕೆಟ್ ಪಡೆದವರಿಗೆ ನೆಕ್ಟ್ ಶೋ ನೋಡಲು ಅನುಮತಿ ನೀಡಿ,ನಿರಾಸೆಯಿಂದ ಚಿತ್ರಮಂದಿರದಿಂದ ಮರಳಿ ತೆರಳಿದ ಪೇಕ್ಷಕರು.
Kshetra Samachara
14/10/2021 04:16 pm