ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಧಾರವಾಡ: ಹೆಚ್ಚೂ ಕಡಿಮೆ ಮೂರು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರ ಮಂದಿರಗಳು ಇಂದಿನಿಂದ ಪುನರಾರಂಭಗೊಂಡಿವೆ. ಧಾರವಾಡದ ನಾಲ್ಕು ಚಿತ್ರಮಂದಿರಗಳ ಪೈಕಿ ಎರಡು ಚಿತ್ರಮಂದಿರಗಳು ಇಂದಿನಿಂದ ಪುನರಾರಂಭಗೊಂಡಿವೆ.
ಕೊರೊನಾ ಲಾಕಡೌನ್ ಎಫೆಕ್ಟ್‌ನಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಜುಲೈ 19 ನೇ ತಾರೀಖಿನಂದು ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಪರವಾನಿಗಿ ನೀಡಿದೆ. ಚಿತ್ರಮಂದಿರದ ಮಾಲೀಕರು ಕೊಂಚ ತಡವಾಗಿಯೇ ಚಿತ್ರಮಂದಿರಗಳನ್ನು ತೆರೆದಿದ್ದಾರೆ.
ಧಾರವಾಡದ ಪದ್ಮಾ ಹಾಗೂ ಸಂಗಮ ಚಿತ್ರಮಂದಿರಗಳನ್ನು ಮಾತ್ರ ತೆರೆಯಲಾಗಿದ್ದು, ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಚಿತ್ರಮಂದಿರದ ಒಳಗೆ ಒಂದು ಖುರ್ಚಿ ಬಿಟ್ಟು ಮತ್ತೊಂದು ಖುರ್ಚಿಗೆ ಪ್ರೇಕ್ಷಕರು ಕುಳಿತುಕೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ. ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯ ಪ್ರಕಾರವೇ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.
ಪದ್ಮಾ ಚಿತ್ರಮಂದಿರದಲ್ಲಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಪ್ರದರ್ಶನವಾಗುತ್ತಿದ್ದು, ಸಂಗಮ ಚಿತ್ರಮಂದಿರದಲ್ಲಿ ಮಾರ್ಟಲ್ ಕಂಬ್ಯಾಟ್ ಎಂಬ ಇಂಗ್ಲಿಷ್ ಚಿತ್ರ ಪ್ರದರ್ಶನ ಕಾಣುತ್ತಿದೆ. ಎರಡೂ ಚಿತ್ರಮಂದಿರದಲ್ಲಿ ಮೊದಲ ದಿನವೇ ಪ್ರೇಕ್ಷಕರ ಕೊರತೆ ಎದ್ದು ಕಂಡಿದ್ದು, ಇನ್ನಷ್ಟೇ ಚಿತ್ರಮಂದಿರಗಳ ಮಾಲೀಕರು ತಮ್ಮ ಉದ್ಯಮದಲ್ಲಿ ಚೇತರಿಕೆ ಕಾಣಬೇಕಿದೆ.
Kshetra Samachara
30/07/2021 06:15 pm