ಧಾರವಾಡ: ದೊಡ್ಮನೆ ಎಂದೇ ಖ್ಯಾತಿ ಹೊಂದಿರುವ ಬಿಗ್‌ಬಾಸ್ ಸೀಸನ್-8ಕ್ಕೆ ಧಾರವಾಡದ ಕುವರ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾನೆ.
ಬಿಗ್‌ಬಾಸ್ ಆರಂಭವಾಗುವ ನಾಲ್ಕು ಗಂಟೆ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಈ ಸ್ಪರ್ಧಿಯ ಹೆಸರು ರಿವೀಲ್ ಆಗಿತ್ತು. ಹಾಗಾದ್ರೆ ಈ ಸ್ಪರ್ಧಿಯ ಹೆಸರು ಏನು ಅಂತೀರಾ? ಅವರೇ ವಿಶ್ವನಾಥ ಹಾವೇರಿ. ವಿಶ್ವನಾಥ ಯುವ ಗಾಯಕರಾಗಿದ್ದಾರೆ. ಇವರು ಬಿಗ್‌ಬಾಸ್‌ನ ನಾಲ್ಕನೇ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.
ವಿಶ್ವನಾಥ ಅವರು ಹಾಡು ಕರ್ನಾಟಕ ಎಂಬ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದ್ದರು. ಇದೀಗ ಬಿಗ್‌ಬಾಸ್ ಸೀಸನ್ 8ಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಇಡೀ ಕರ್ನಾಟಕ ಧಾರವಾಡದತ್ತ ನೋಡುವಂತೆ ಮಾಡಿದ್ದಾರೆ.
Kshetra Samachara
28/02/2021 10:05 pm