ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆ. 20 ರಂದು ಶಿವ 143 ಶಿವ 143 ಚಿತ್ರದ ಪ್ರಮೋಷನ್; ನಟ ರಾಘು ವದ್ದಿ

ವರನಟ ಡಾ. ರಾಜಕುಮಾರ್ ಅವರ ಮೊಮ್ಮಗ, ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಳಿಯ ದೀರನ್ ರಾಮ್ ಕುಮಾರ್ ತಮ್ಮ ಚೊಚ್ಚಲ ಚಿತ್ರ ಶಿವ 143 ಚಿತ್ರ ಇದೇ ಆಗಷ್ಟ್ 26 ರಂದು ಬಿಡುಗಡೆಯಾಗಲಿದೆ.

ಸದ್ಯ ಚಿತ್ರದ ಪ್ರಮೋಷನ್ ಗಾಗಿ ಚಿತ್ರತಂಡ ಇದೇ 20 ರಂದು ನಗರಕ್ಕೆ ಆಗಮಿಸುತ್ತಿದ್ದು, ಅಂದು ಬೆಳಿಗ್ಗೆ ಸಿದ್ಧಾರೂಢಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆಂದು ಜೈ ರಾಜವಂಶ ಅಭಿಮಾನಿಗಳ ಸಂಘದ ರಾಘು ವದ್ದಿ ಹೇಳಿದರು.

ಅಂದಿನ ಕಾರ್ಯಕ್ರಮದಲ್ಲಿ ಅಪ್ಪು ಸಹೋದರಿ ಪೂರ್ಣಿಮಾ ರಾಮಕುಮಾರ, ಧನ್ಯಾ ರಾಮಕುಮಾರ ಭಾಗವಹಿಸಲಿದ್ದು, ಅಂದು ಚಿತ್ರದ ಪ್ರಮೋಷನ್ ಗಾಗಿ ನಗರದ ಮೂರುಸಾವಿರಮಠದಿಂದ ಚನ್ನಮ್ಮ ವೃತ್ತದವರೆಗೂ ಉತ್ತರ ಕರ್ನಾಟಕ ಸಂಪ್ರದಾಯದಂತೆ ಕುಂಭ, ಮೆರವಣಿಗೆ, ಡೊಳ್ಳು ಕುಣಿತ, ಬೊಂಬೆ ಕುಣಿತ ಸೇರಿದಂತೆ ಅಪ್ಪು ಭಾವಚಿತ್ರವನ್ನು ಬೃಹತ್ ಪ್ರಮಾಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Edited By :
Kshetra Samachara

Kshetra Samachara

19/08/2022 06:56 pm

Cinque Terre

20.75 K

Cinque Terre

1

ಸಂಬಂಧಿತ ಸುದ್ದಿ