ಹುಬ್ಬಳ್ಳಿ: ಸ್ಟಾರ್ ನಟರ ಫಿಲ್ಮ್ ಬಿಡುಗಡೆ ಆದರೇ ಅಭಿಮಾನಿಗಳು ಕ್ಷೀರಾಭಿಷೇಕ ಮಾಡುವುದು.ಪಟಾಕಿ ಸಿಡಿಸುವುದು, ಘೋಷಣೆ ಕೂಗಿ ಅಭಿಮಾನ ವ್ಯಕ್ತಪಡಿಸುವುದು ಕಾಮನ್. ಆದರೆ ಹುಬ್ಬಳ್ಳಿಯ ಅಭಿಮಾನಿಗಳು ಮಾತ್ರ ವಿನೂತನವಾಗಿ ತಮ್ಮ ಅಭಿಮಾನವನ್ನು ಪ್ರದರ್ಶಿಸುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅಷ್ಟಕ್ಕೂ ಯಾರು ಆ ಅಭಿಮಾನಿಗಳು..? ಅವರು ಮಾಡಿದ್ದಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್.
ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಜೇಮ್ಸ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಅಭಿಮಾನಿಗಳು ಸಾಕಷ್ಟು ಬೆಂಬಲವನ್ನು ನೀಡಿ ಚಿತ್ರದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನೂ ವಿಶೇಷ ಅಂದ್ರೇ ಪುನೀತ್ ಅವರ ಜನ್ಮದಿನದ ಅಂಗವಾಗಿಯೇ ಚಿತ್ರ ಬಿಡುಗಡೆಯಾಗಿದ್ದು, ಹುಬ್ಬಳ್ಳಿ ರಾಜವಂಶ ಅಭಿಮಾನಿ ಬಳಗ ಮಾತ್ರ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಹೌದು,ಹುಬ್ಬಳ್ಳಿ ಪುನೀತ್ ರಾಜಕುಮಾರ ಅಭಿಮಾನಿ ರಾಘವೇಂದ್ರ ವದ್ದಿ ನೇತೃತ್ವದಲ್ಲಿ ರಾಜವಂಶ ಅಭಿಮಾನಿ ಬಳಗ ಸುಮಾರು ನೂರು ಜನ ಅಂಧರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಸಿನಿಮಾದ ಅಭಿಮಾನ ಎಂದರೇ ಕೇವಲ ಚಿತ್ರವನ್ನು ನೋಡುವುದು,ಸಿಳ್ಳೆ ಸೀಟಿ ಹೊಡೆಯುವುದು ಮಾತ್ರವಲ್ಲ ನಮ್ಮ ಚಿತ್ರನಟರ ಮೇಲಿನ ಅಭಿಮಾನ ಅಸಹಾಯಕರಿಗೆ ಸಹಾಯ ಮಾಡುವಂತಾಗಬೇಕು ಎಂಬುವುದನ್ನು ತೋರಿಸಿದ್ದಾರೆ.
ಅಲ್ಲದೇ ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸುಮಾರು ನೂರು ಅಂಧರ ಬಾಳಿನಲ್ಲಿ ಹೊಸ ಚೈತನ್ಯ ತುಂಬಿದಂತಾಗಿದೆ.ಇದರಿಂದ ನಮ್ಮ ಬದುಕಿನಲ್ಲಿ ಏನಾದರೂ ಮಾಡಲು ಸಹಾಯವಾಗುತ್ತೇ ಅಂತಾರೆ ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡವರು.
ಒಟ್ಟಿನಲ್ಲಿ ಹುಬ್ಬಳ್ಳಿ ಹೈದರ ಈ ಒಂದು ಕಾರ್ಯ ನೂರು ಕುಟುಂಬದ ಜೀವನಕ್ಕೆ ಸಹಾಯಹಸ್ತವನ್ನು ಒದಗಿಸಿದೆ. ನಿಮ್ಮ ಅಭಿಮಾನ ಮತ್ತೊಬ್ಬರ ಜೀವನಕ್ಕೆ ಸಹಾಯಕವಾಗಲಿ ಎಂಬುವಂತ ಸಂದೇಶವನ್ನು ಸಾರಿದ ಯುವಕರ ಕಾರ್ಯ ಹೀಗೆ ಮುಂದುವರೆಯಲಿ ಎಂಬುವುದು ನಮ್ಮ ಆಶಯವಾಗಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/03/2022 04:56 pm