ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕನ್ನಡದ ಕಣ್ಮಣಿ ಅಪ್ಪುಗೆ ಕಲಾ ಶ್ರದ್ಧಾಂಜಲಿ

ಧಾರವಾಡ: ಕನ್ನಡದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆಯಿಂದ ಇಡೀ ದೇಶವೇ ಮಮ್ಮಲ ಮರುಗುತ್ತಿದೆ, ಇಡೀ ಚಿತ್ರರಂಗ ಆಘಾತಕ್ಕೀಡಾಗಿದೆ. ಮೇರು ನಟನನ್ನು ಕಳೆದುಕೊಂಡಿದ್ದಕ್ಕೆ ಅನೇಕರು ಅನೇಕ ರೀತಿಯಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಕೂಡ ಮಣ್ಣಿನಲ್ಲಿ ಪುನೀತ್ ರಾಜಕುಮಾರ್ ಅವರ ಕಲಾಕೃತಿ ಮಾಡಿ ಅವರಿಗೆ ತಮ್ಮ ಕಲೆಯ ಮೂಲಕ ಕಲಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುನೀತ್ ಅವರ ನಿಧನದ ಸುದ್ದಿ ತಿಳಿದ ಕೂಡಲೇ ಐದು ಗಂಟೆ ಸಮಯ ತೆಗೆದುಕೊಂಡು ಮಣ್ಣಿನಲ್ಲಿ ಪುನೀತ್ ಅವರ ಕಲಾಕೃತಿ ಮಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

30/10/2021 09:42 am

Cinque Terre

44.51 K

Cinque Terre

3

ಸಂಬಂಧಿತ ಸುದ್ದಿ